Friday, June 26, 2026
Homeಕರಾವಳಿಬೆಳ್ತಂಗಡಿ: ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ 'ಸುಜೀತಾ ವಿ ಬಂಗೇರ'ರಿಗೆ ಗೌರವರ್ಪಣೆ

ಬೆಳ್ತಂಗಡಿ: ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ‘ಸುಜೀತಾ ವಿ ಬಂಗೇರ’ರಿಗೆ ಗೌರವರ್ಪಣೆ

- Advertisement -
- Advertisement -

ಬೆಳ್ತಂಗಡಿ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಅಂಗ ಸಂಸ್ಥೆಯಾದ ಮಹಿಳಾ ಬಿಲ್ಲವ ವೇದಿಕೆಯ ನೂತನ ಅಧ್ಯಕ್ಷರಾಗಿ ಸುಜಿತಾ ವಿ ಬಂಗೇರ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಸುಜೀತಾ ವಿ ಬಂಗೇರ ಆಯ್ಕೆಯಾದರು.

ಈ ಸಂದರ್ಭದಲ್ಲಿ ಗುರುದೇವ ಕಾಲೇಜು ಟ್ರಸ್ಟಿ ಬಿನುತಾ ಬಂಗೇರ, ಮಹಿಳಾ ಬಿಲ್ಲವ ವೇದಿಕೆ ನಿಕಟಪೂರ್ವದ್ಯಕ್ಷೆ ರಾಜಶ್ರೀ ರಮಣ್, ಮಾಜಿ ಅಧ್ಯಕ್ಷೆ ವಿನೋದಿನಿ ರಾಮಪ್ಪ, ಸಂಘದ ನಿರ್ದೇಶಕರಾದ ಪುಷ್ಪಾವತಿ ನಾವರ,ಯಶೋಧ ನಾರಾವಿ, ಕಾರ್ಯದರ್ಶಿ ಶಾಂಭವಿ ಪಿ ಬಂಗೇರ, ಜತೆ ಕಾರ್ಯದರ್ಶಿಪಲ್ಲವಿ ರಾಜು ಬೆಳ್ತಂಗಡಿ, ವಿನೋದ ಪಡಂಗಡಿ,ಸಂಘಟನಾ ಕಾರ್ಯದರ್ಶಿಗಳಾದ ವಿಜಯ ಹರಿದಾಸ್ ,ವಸಂತಿ ಕುದ್ಯಾಡಿ ಹಾಗೂ ಇತರರು ಉಪಸ್ಥಿತರಿದ್ದರು.

ಸುಜೀತಾ ವಿ ಬಂಗೇರರ ಮನೆಗೆ ತೆರಳಿ ಅಭಿನಂದನೆ ಸಲ್ಲಿಸಿದರು. ಸುಜೀತಾ ವಿ ಬಂಗೇರರವರು ಎಲ್ಲರನ್ನು ಅತ್ಮೀಯವಾಗಿ ಬರಮಾಡಿಕೊಂಡು ಕೃತಜ್ಞತೆ ಅರ್ಪಿಸಿದರು.

- Advertisement -

Latest News

error: Content is protected !!