Saturday, May 18, 2024
Homeಕರಾವಳಿಮಂಗಳೂರು: ರಾತ್ರಿ ವೇಳೆ ಅಕ್ರಮವಾಗಿ ಕಸ ಎಸೆಯುತ್ತಿದ್ದ ವಾಹನಕ್ಕೆ 5000 ರೂ. ದಂಡ...!

ಮಂಗಳೂರು: ರಾತ್ರಿ ವೇಳೆ ಅಕ್ರಮವಾಗಿ ಕಸ ಎಸೆಯುತ್ತಿದ್ದ ವಾಹನಕ್ಕೆ 5000 ರೂ. ದಂಡ…!

spot_img
- Advertisement -
- Advertisement -

ಮಂಗಳೂರು: ರಾತ್ರಿ ವೇಳೆ ಅಕ್ರಮವಾಗಿ ಕಸ ಎಸೆಯುತ್ತಿದ್ದ ವಾಹನಕ್ಕೆ 5000 ರೂ. ದಂಡ ವಿಧಿಸಿದ ಘಟನೆ ನಡೆದಿದೆ. ಹಲವಾರು ದಿನಗಳಿಂದ ಬಂಗ್ರಕಾಳೂರು ಗೋಲ್ಡ್‌ ಫಿಂಚ್‌‌ ಮೈದಾನದ ಎದುರುಗಡೆ ಇರುವ ಸರಕಾರಿ ಖಾಲಿ ಜಾಗದಲ್ಲಿ ಲಾರಿ, ಟೆಂಪೋ, ಪಿಕಪ್‌‌ಗಳ ಮೂಲಕ ಕಸ ಹಾಗೂ ಇತರ ತ್ಯಾಜ್ಯಗಳನ್ನು ರಾತ್ರಿ ಎಸೆದು ಹೋಗುತ್ತಿದ್ದರು.

ಈ ಬಗ್ಗೆ ಹಲವಾರು ಬಾರಿ ಮ.ನ.ಪಾ ಸದಸ್ಯರು ಹಾಗೂ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಮ.ನ.ಪಾದ ಆಯುಕ್ತರು ಬಂದು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದ್ದರು. ಆದರೆ, ರಾತ್ರಿ ವೇಳೆ ಕದ್ದುಮುಚ್ಚಿ ಕಸ ಎಸೆದು ಹೋಗುವವರನ್ನು ತಡೆಯುವುದು ಕಷ್ಟ ಸಾಧ್ಯವಾಗಿತ್ತು. ಹಾಗಾಗಿ ಸ್ಥಳೀಯ ಮ.ನ.ಪಾ ಸದಸ್ಯರಾದ ಕಿರಣ್‌ ಕುಮಾರ್‌ ಕೋಡಿಕಲ್‌‌‌ ಹಾಗೂ ಸ್ಥಳೀಯ ನಾಗರಿಕರು ರಾತ್ರಿ ವೇಳೆ ಕಾದು ಕುಳಿತು ಕಸ ಎಸೆಯಲು ಬಂದ ಪಿಕಪ್‌‌ ಅನ್ನು ತಡೆದು ಆಯುಕ್ತರಿಗೆ ಮಾಹಿತಿ ನೀಡಿದ್ಧಾರೆ.

ಆಯುಕ್ತರು ಆರೋಗ್ಯಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ವಾಹನಕ್ಕೆ 5000 ರೂ ದಂಡವನ್ನು ವಿಧಿಸಿದ್ದು, ಇನ್ನೊಮ್ಮೆ ಈ ರೀತಿಯಾದ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದಲ್ಲಿ ವಾಹನವನ್ನೇ ವಶಕ್ಕೆ ಪಡೆಯುವುದಾಗಿ ಎಚ್ಚರಿಕೆ ನೀಡಿದ್ಧಾರೆ.

- Advertisement -
spot_img

Latest News

error: Content is protected !!