Thursday, May 2, 2024
Homeಕರಾವಳಿಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಗೆ ಮತ್ತೆ ಹಾಜರು: ಜ.23 ಕ್ಕೆ ವಿಚಾರಣೆ...

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಗೆ ಮತ್ತೆ ಹಾಜರು: ಜ.23 ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

spot_img
- Advertisement -
- Advertisement -

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಪತ್ನಿ ಸರೋಜ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧಿಸಿದಂತೆ ಹೈಕೋರ್ಟ್ ಮಹೇಶ್ ಶೆಟ್ಟಿಗೆ ಖುದ್ದು ಹಾಜರಾಗಲು ಆದೇಶದಂತೆ  ಜ.5 ರಂದು ಹೈಕೋರ್ಟ್ ಗೆ ಖುದ್ದು ಮಹೇಶ್ ಶೆಟ್ಟಿ ಮತ್ತು ಪತ್ನಿ ಸರೋಜ ಹಾಜರಾಗಿದ್ದರು.  ವಾದವನ್ನು ಜ.11 ಗುರುವಾರಕ್ಕೆ ಮುಂದೂಡಿದಿತ್ತು.‌ ಮಹೇಶ್ ಶೆಟ್ಟಿ ಮಾತ್ರ ಕೋರ್ಟ್ ಗೆ ಹಾಜರಾಗಿದ್ದು.ಪತ್ನಿ ಸರೋಜ ಕೋರ್ಟ್ ಗೆ ಗೈರಾಗಿದ್ದರು ಇದರಿಂದ ಮತ್ತೆ ಜ.23 ಮಂಗಳವಾರಕ್ಕೆ ಹೈ ಕೋರ್ಟ್ ವಿಚಾರಣೆ ಮುಂದೂಡಿದೆ.

ಅರ್ಜಿ ನಂಬ್ರ: ಸಿ.ಸಿ.ಸಿ ೩೦೪/೨೦೨೦ ಸಂಬಂಧಿಸಿದಂತೆ ಆದೇಶ ಮಾಡಿದ ನ್ಯಾಯಮೂರ್ತಿಗಳನ್ನು ಅವ್ಯಾಚ್ಯವಾಗಿ ನಿಂದಿಸಿದ ಮಹೇಶ್ ಶೆಟ್ಟಿ ತಿಮರೋಡಿಯ ನಡತೆ ಬಗ್ಗೆ ತಿಮರೋಡಿ ಪರ ವಕೀಲರು ಹೈ ಕೋರ್ಟಿನಲ್ಲಿ ಇಂದು ತಿಮರೋಡಿ ಆ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ ಮತ್ತು ಈ ಬಗ್ಗೆ ಅವರಿಗೆ ಇನ್ನು ಈ ರೀತಿ ಮಾಡದಂತೆ ತಿಳಿ ಹೇಳುವುದಾಗಿ ನ್ಯಾಯಾಲಯದ ಜವಾಬ್ದಾರಿಯುತ ನ್ಯಾಯವಾದಿಯಾಗಿ ಹೈಕೋರ್ಟ್ಗೆ ಹೇಳಿಕೆಯನ್ನು ನೀಡಿರುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ನ್ಯಾಯಾಲಯವು ಅವರನ್ನು ನ್ಯಾಯಾಲಯದ ಮುಂದೆ ಜನವರಿ 5 ತಾರೀಖಿನಂದು ಕುದ್ದು  ಹಾಜರಾಗುವಂತೆ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಆತನ ಪತ್ನಿ ಸರೋಜಗೆ ಗೌರವಾನ್ವಿತ ನ್ಯಾಯ ಮೂರ್ತಿಗಳಾದ ಪಿ.ಎಸ್. ದಿನೇಶ್ ಕುಮಾರ್ ಹಾಗೂ ಟಿ. ಜಿ. ಶಿವಶಂಕರೇ ಗೌಡ ಅವರ ನ್ಯಾಯಪೀಠ ಆದೇಶ ಮಾಡಿದ್ದರು. ಅದರಂತೆ ಜ.5 ರಂದು ಬೆಂಗಳೂರಿನ ಹೈಕೋರ್ಟ್ ಗೆ ಹಾಜರಾಗಿದ್ದು. ಮಧ್ಯಾಹ್ನದ ನಂತರ ಸಿಟ್ಟಿಂಗ್ ಇಲ್ಲದ ಕಾರಣ ಮುಂದಿನ ವಾರ ಜ.11 ಗುರುವಾರಕ್ಕೆ ಕೋರ್ಟ್ ಮುಂದೂಡಿತು. ಪತ್ನಿ ಸರೋಜ ಕೋರ್ಟ್ ಗೆ ವೈರಾಗಿರುವ ಕಾರಣ ವಕೀಲರಾದ ಶ್ರೀನಿವಾಸ್ ಇ.ಪಿ ಸಲ್ಲಿಸಿದರು. ಮಹೇಶ್ ಶೆಟ್ಟಿ ಪರ ವಕೀಲ ನ್ಯಾಯಧೀಶರ ಬಳಿ ನ್ಯಾಯಾಂಗ ನಿಂದನೆ ಕುರಿತು ವಾದಿಸಿದ್ದು.ಈ ಪ್ರಕರಣದ ಖಾಸಗಿ ಜಾಗದ ಕುರಿತು ಜಡ್ಜ್ ಗೆ ನಿಂದನೆ ಮಾಡಿರುವುದು ಅಲ್ಲ. ಬೇರೆ ವಿಚಾರದಲ್ಲಿ ಎಂದು ಹೇಳಿ ಆರೋಪಿ ಪರವಾಗಿ ಕೋರ್ಟ್ ಮುಂದೆ ಕ್ಷಮೆ ಕೇಳಿದ್ದು. ಇದಕ್ಕೆ ಜಡ್ಜ್ ಮುಂದಿನ ಜ.23ರ ಮಂಗಳವಾರಕ್ಕೆ ವಾದಕ್ಕೆ ಯಾವ ಕಾರಣಕ್ಕಾಗಿ ನಿಂದನೆ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿ ಅರ್ಜಿ ಸಲ್ಲಿಸಲು ಸೂಚಿಸಿದ್ದಾರೆ.

ದೂರುದಾರರ ಪರವಾಗಿ ಖ್ಯಾತ ಹಿರಿಯ ನ್ಯಾಯವಾದಿಗಳಾದ ಶ್ರೀ ಚಂದ್ರನಾಥ ಆರಿಗ ಅವರು ವಾದಿಸಿದರು.

- Advertisement -
spot_img

Latest News

error: Content is protected !!