Friday, May 17, 2024
Homeಕರಾವಳಿಕಾರಿಂಜೇಶ್ವರ ದೇವಸ್ಥಾನದಲ್ಲಿ ಮಾ.6 ರಿಂದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ

ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಾ.6 ರಿಂದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ

spot_img
- Advertisement -
- Advertisement -

ಬಂಟ್ವಾಳ: ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಜಾತ್ರೆಯು 2024 ಮಾ.06ರಿಂದ ಮಾ. 12ರ ವರೆಗೆ ಜರಗಲಿದೆ.

ಮಾರ್ಚ್ 06 ಬುಧವಾರಂದು ಧ್ವಜಾರೋಹಣವಾಗಿ ಮಾರ್ಚ್ 12 ಮಂಗಳವಾರದವರೆಗೆ ಪೂರ್ವ ಸಂಪ್ರದಾಯದಂತೆ ಶ್ರೀ ಕಾರಿಂಜೇಶ್ವರ ದೇವಸ್ಥಾನ ಮತ್ತು ಶ್ರೀ ದುರ್ಗಾ ಸನ್ನಿಧಿಯಲ್ಲಿ ಮಹಾ ಶಿವರಾತ್ರಿಯ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 3 ರಂದು ಬಿಸಿರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿಯಿಂದ ಶ್ರೀ ಕಾರಿಂಜೇಶ್ವರ ಕ್ಷೇತ್ರಕ್ಕೆ ನೂತನ ರಥದ ಶೋಭಾ ಯಾತ್ರೆಯು ಜರಗಲಿರುವುದು.ಮಾ. 06 ಬುಧವಾರದಂದು ಸಂಜೆ 4 ಗಂಟೆಗೆ ವಗ್ಗ ಕಾರಿಂಜ ಕ್ರಾಸ್ ಬಳಿಯಿಂದ ಶ್ರೀ ಪಾರ್ವತಿ ದೇವಿಯ ನೂತನ ರಜತ ಪ್ರಭಾವಳಿಯ ಶೋಭಾಯಾತ್ರೆ ಹಾಗೂ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸೀಮೆಗೆ ಒಳಪಟ್ಟ ಎಲ್ಲಾ ಗ್ರಾಮಸ್ಥರು ಸಮರ್ಪಿಸುವ ಹಸಿರು ವಾಣಿ ಹೊರೆಕಾಣಿಕ ಮೆರವಣಿಗೆ ನಡೆಯಲಿದೆ. ಸಂಜೆ 4.30 ರಿಂದ ಶ್ರೀ ಕಾವೀ: ಯಕ್ಷಬಳಗ ವರ್ಕಾಡಿ ಅವರಿಂದ ಯಕ್ಷಗಾನ ತಾಳಮದ್ದಳೆ “ಶ್ರೀ ಶನೀಶ್ವರ ಮಹಾತ್ಮೆ’ ನಡೆಯಲಿದೆ.

ಮಾರ್ಚ್ 7 ಗುರುವಾರದಂದು, ಬೆಳಿಗ್ಗೆ ಗಂಟೆ 8ಕ್ಕೆ ಗಣಹೋಮ, ಮಧ್ಯಾಹ್ನ ಗಂಟೆ 12.00 ರಿಂದ 12.30ರವರೆಗೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ಹಾಗೂ ರಾತ್ರಿ 8 ಗಂಟೆಗೆ ನಿತ್ಯ ಉತ್ಸವಗಳು ಜರಗಲಿದೆ.

ಮಾರ್ಚ್ 8 ಶುಕ್ರವಾರದಂದು ಮಹಾಶಿವರಾತ್ರಿ ಜಾಗರಣೆ ನಡೆಯಲಿದೆ. ಬೆಳಿ‌ಗ್ಗೆ 10 ಗಂಟೆಗೆ ಶ್ರೀ ಮಹಿಷಮರ್ದಿನಿ ಯಕ್ಷಕಲಾ ಪ್ರತಿಷ್ಠಾನ ಅವರಿಂದ ಯಕ್ಷಗಾನ ತಾಳಮದ್ದಲೆ, ಮಧ್ಯಾಹ್ನ ಗಂಟೆ 12 ರಿಂದ 12.30ರ ತನಕ ಮಹಾಪೂಜೆ, ಸಂಜೆ 5 ಗಂಟೆಗೆ ಶ್ರೀ ದುರ್ಗಾ ಸನ್ನಿಧಿಯಲ್ಲಿ ಉತ್ಸವ, ಸಂಜೆ 6 ಗಂಟೆಗೆ ಶ್ರೀ ಕಾರಿಂಜೇಶ್ವರ ಸನ್ನಿಧಿಯಲ್ಲಿ ತುಲಾಭಾರ ಸೇವೆ ಮತ್ತು ಏಕಾದಶ ರುದ್ರಾಭಿಷೇಕ ಆರಂಭ ಸೇರಿಂದತೆ ಹಲವು ಕಾರ್ಯಕ್ರಮಗಳು ಜರಗಲಿದೆ. 

ಮಾರ್ಚ್ 9 ಶನಿವಾರಂದು ಬೆಳಿಗ್ಗೆ 8 ರಿಂದ ಶ್ರೀ ದುರ್ಗಾ ಸನ್ನಿಧಿಯಲ್ಲಿ ದರ್ಶನ ಬಲಿ, ಮಧ್ಯಾಹ್ನ ಗಂಟೆ 12 ರಿಂದ 12.30ರವರೆಗೆ ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ ಗಂಟೆ 2.30ರಿಂದ ಯಕ್ಷಗಾನ ತಾಳಮದ್ದಲೆ, ಸಂಜೆ ಗಂಟೆ 7ರಿಂದ ವೈಷ್ಣವಿ ಜೆ. ರಾವ್ ಹಾಗೂ ವೇದಿಕಾ ಉಪಾದ್ಯಾಯ ಅವರಿಂದ ಭರತ ನಾಟ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.

ಮಾರ್ಚ್ 10 ಭಾನುವಾರ ಬೆಳಿಗ್ಗೆ 7 ಗಂಟೆಗೆ ಕವಾಟೋದ್ಘಾಟನೆ ಶಯನ ಸೇವಾ ಪ್ರಸಾದ ವಿತರಣೆ, ಬೆಳಿಗ್ಗೆ ಗಂಟೆ 11.30ಕ್ಕೆ ಮಹಾರಥೋತ್ಸವ, ದೈವದ ನೇಮೋತ್ಸವ, ಮಧ್ಯಾಹ್ನ ಗಂಟೆ 1 ರಿಂದ ಮಹಾಪೂಜೆ ಮತ್ತು ಅನ್ನಸಂತರ್ಪಣೆ(ರಥಬೀದಿಯಲ್ಲಿ) ರಾತ್ರಿ ಗಂಟೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. 

ಮಾರ್ಚ್ 11 ಸೋಮವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ದುರ್ಗಾ ಸನ್ನಿಧಿಯಲ್ಲಿ ದರ್ಶನ ಬಲಿ, ದರ್ಶನ ಪ್ರಸಾದ, ತಪ್ಪಂಗಾಯಿ, ಮಧ್ಯಾಹ್ನ ಗಮಟೆ 12 ರಿಂದ 12.30ರವರೆಗೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಗಂಟೆ 6ರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ ಗಮಟೆ 7.30 ರಿಂದ 10ರತನಕ  ಅನ್ನಸಂತರ್ಪಣೆ, ರಾತ್ರಿ 11 ಗಂಟೆಗೆ ಪಾರ್ವತಿ ಪರಮೇಶ್ವರ ದೇವ ಭೇಟಿ, “ಕಟ್ಟೆಪೂಜೆ ಉತ್ಸವಗಳು, ಶ್ರೀ ಭೂತ ಬಲಿ, ದೇವರ ಶಯನ, ಕವಾಟ ಬಂಧನ ಜರಗಲಿದೆ.

ಮಾರ್ಚ್ 12 ಮಂಗಳವಾರದಂದು ಬೆಳಿಗ್ಗೆ 8 ಗಂಟೆಗೆ ಕಾವಟೋದ್ಘಾಟನೆ, ಮಧ್ಯಾಹ್ನ ಗಂಟೆ 12 ರಿಂದ 12.30ರವರೆಗೆ ಮಹಾಪೂಜೆ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಅವಭೃತ ಸ್ನಾನಕ್ಕೆ ಹೊರಡುವುದು, ವ್ಯಾಘ್ರುಚಾಮುಂಡಿ ದೈವದ ನೇಮೋತ್ಸವ, ದೇವರ ಅವಭೃತ ಸ್ನಾನ, ಧ್ವಜಾವರೋಹನ ನಡೆಯಲಿದೆ.

- Advertisement -
spot_img

Latest News

error: Content is protected !!