- Advertisement -
- Advertisement -
ಬೆಂಗಳೂರು : ಬೆಂಗಳೂರಿನ ವೈಯಲಿಕಾವಲ್ ನಲ್ಲಿ ನಡೆದ ಮಹಾಲಕ್ಷ್ಮೀ ರಣ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿ ಮುಕ್ತಿ ರಂಜನ್ ರಾಯ್ ತಾಯಿ ಕುಂಜಲತಾ ರಾಯ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಪಿ ತಾಯಿ ಕುಂಜಲತಾ ರಾಯ್, ನನ್ನ ಮಗನ ವಿರುದ್ಧ ಮಹಾಲಕ್ಷ್ಮೀ ಹನಿ ಟ್ರ್ಯಾಪ್ ಮಾಡಿದ್ದಳು. ಅವಳು ಅವನಿಂದ ನಿರಂತರವಾಗಿ ಹಣ ಕೇಳುತ್ತಲೇ ಇದ್ದಳು. ಈ ವಿಚಾರವನ್ನು ಆತ ಹೇಳಿಕೊಂಡಿದ್ದ. ನಾನು ಅವನನ್ನು ಬೆಂಗಳೂರು ತೊರೆಯುವಂತೆ ಹೇಳಿದ್ದೆ ಎಂದು ಹೇಳಿಕೊಂಡಿದ್ದಾರೆ.
ಮುಕ್ತಿ ರಂಜನ್ ರಾಯ್ ಹಾಗೂ ಮಹಾಲಕ್ಷ್ಮಿ ಬೆಂಗಳೂರಿನ ಅಂಗಡಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಮೊದಲ ಪರಿಚಯ ಸ್ನೇಹದಿಂದ ಆರಂಭವಾಗಿ ನಂತರ ಪ್ರೀತಿಗೆ ತಿರುಗಿತ್ತು. ಬಳಿಕ ಮಹಾಲಕ್ಷ್ಮಿ ಮುಕ್ತಿ ರಂಜನ್ ರಾಯ್ಗೆ ಮದುವೆಯಾಗು ಎಂದು ಪೀಡಿಸುತ್ತಿದ್ದಳು.ಇದಕ್ಕೆ ಬೇಸತ್ತು ಮುಕ್ತಿ ರಂಜನ್ ರಾಯ್ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ತಾಯಿ ಹೇಳಿದ್ದಾರೆ.
- Advertisement -