Saturday, June 13, 2026
Homeಕರಾವಳಿಮಂಗಳೂರುಮಂಗಳೂರು: ಬಾಗಲಕೋಟೆಯ ಬಸವರಾಜ್ ಕೊಲೆ ಪ್ರಕರಣ; ಆರೋಪಿಯನ್ನು ಬಂಧಿಸಿದ ಪೊಲೀಸರು

ಮಂಗಳೂರು: ಬಾಗಲಕೋಟೆಯ ಬಸವರಾಜ್ ಕೊಲೆ ಪ್ರಕರಣ; ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರು: ಸೆ.21ರಂದು ಪಣಂಬೂರು ಪೊಲೀಸ್‌ ಠಾಣೆಯ ತೋಟ ಬೆಂಗ್ರೆಯ ಬೊಬ್ಬರ್ಯ ದೇವಸ್ಥಾನದ ಸಮೀಪ ನಡೆದ  ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸಪ ಆರೋಪಿಯನ್ನು ಬಂಧಿಸಿದ್ದಾರೆ.

ಬಾಗಲಕೋಟೆ ಮೂಲದ ಮುತ್ತು ಬಸವರಾಜ ವಡ್ಡರ್‌ ಅಲಿಯಾಸ್‌ ಮುದುಕಪ್ಪ(39)  ಎಂಬಾತನನ್ನು ಕಡಲ ತೀರದ ಬಳಿ ಕೊಲೆ ಮಾಡಲಾಗಿತ್ತು. ಕೊಲೆ ಆರೋಪಿ ಸ್ಥಳೀಯ ನಿವಾಸಿ ಧರ್ಮರಾಜ್‌ ಸುವರ್ಣ ಎಂಬಾತನನ್ನು ಬಂಧಿಸಲಾಗಿದೆ. ಈತನನ್ನು ಕೇರಳದ ಕೋಝಿಕ್ಕೋಡ್‌ ಜಿಲ್ಲೆಯ ಚೊಂಪಾಳದಲ್ಲಿ ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಧರ್ಮರಾಜ್‌ ಮತ್ತು ಮೃತ ಮುತ್ತು ಬಸವರಾಜ್‌ ಪರಿಚಿತರು. ಇತ್ತೀಚೆಗೆ ಆರೋಪಿ ಧರ್ಮರಾಜ್‌ ಹೊಸ ಮೊಬೈಲ್‌ ತೆಗೆದುಕೊಂಡಿದ್ದ. ಆ ಮೊಬೈಲನ್ನು ಮುತ್ತು ಬಸವರಾಜ್‌ ತೆಗೆದುಕೊಂಡಿದ್ದು, ವಾಪಾಸ್‌ ನೀಡದೆ ಹಾಳು ಮಾಡಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಆರೋಪಿಯು ಮುತ್ತು ಬಸವರಾಜನಿಗೆ ಮರದ ಸೋಂಟೆಯಲ್ಲಿ ಹೊಡೆದು ಕೊಲೆ ಮಾಡಿದ್ದ.ಸದ್ಯ ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!