ಬೆಂಗಳೂರು: ನಟ ಮಡೆನೂರು ಮನು ನಟಿಗೆ ಲೈಂಗಿಕ ಕಿರುಕುಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜೈಲುವಾಸ ಅನುಭವಿಸುತ್ತಿದ್ದ ಸಮಯದಲ್ಲಿ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ನಟರ ಬಗ್ಗೆ ಕೆಟ್ಟದಾಗಿ ಮಾತಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.
ನಟ ಶಿವರಾಜ್ ಕುಮಾರ್ ಸೇರಿದಂತೆ ದರ್ಶನ್, ಧ್ರುವ ಸರ್ಜಾ ಅವರ ಕುರಿತು ಕೆಟ್ಟದಾಗಿ ಮಾತನಾಡಿರುವ ಆಡಿಯೋ ಒಂದು ವೈರಲ್ ಆಗಿದ್ದು, ಆಡಿಯೋ ಕುರಿತು ಪ್ರತಿಕ್ರಿಯಿಸಿದ ಮನು ಈ ಆಡಿಯೋ ನನ್ನದಲ್ಲಾ ಆದರೂ ತಾನು ನಟ ಶಿವರಾಜ್ ಕುಮಾರ್ ಅವರ ಬಳಿ ಕ್ಷಮೆ ಕೇಳಬೇಕೆಂದು ಹೇಳಿದ್ದರು. ಆದರೆ ಹಲವು ಬಾರಿ ಭೇಟಿಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಈ ವಿಚಾರಕ್ಕೆ ಸಂಬಂಧಿಸಿ ಮನು ವಿರುದ್ಧ ಶಿವರಾಜ್ ಕುಮಾರ್, ದರ್ಶನ್ ಅಭಿಮಾನಿಗಳೂ ಆಕ್ರೋಶ ಕೂಡ ಹೊರ ಹಾಕಿದ್ದರು. ಇದಾದ ಬಳಿಕ ಚಿತ್ರರಂಗವೂ ಮನು ಮೇಲೆ ನಿಷೇಧ ಹೇರಿತ್ತು.
ಇನ್ನು ಮಡೆನೂರು ಮನು ಈ ವಿಚಾರದ ಬಗ್ಗೆ ನಟ ಶಿವರಾಜ್ ಕುಮಾರ್ ಅವರನ್ನ ಭೇಟಿ ಮಾಡಿ ಕ್ಷಮೆ ಕೇಳಲು ನಿರ್ಧರಿಸಿದ್ದು, ಇಂದು (ಆ.25) ರಂದು ನಟ ಶಿವರಾಜ್ ಕುಮಾರ್ ಅವರು ಕಂಠೀರವ ಸ್ಟುಡಿಯೋಗೆ ಬರುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಅಲ್ಲಿಗೆ ಬಂದ ಮಡೆನೂರು ಮನು ಶಿವರಾಜ್ ಕುಮಾರ್ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.


