Saturday, June 6, 2026
Homeಕರಾವಳಿಮಾಣಿ : ಮನರೇಗಾ ಗುರುತಿನ ಚೀಟಿ ಹೊಂದಿರುವ 18 ರಿಂದ 44 ವರ್ಷದ...

ಮಾಣಿ : ಮನರೇಗಾ ಗುರುತಿನ ಚೀಟಿ ಹೊಂದಿರುವ 18 ರಿಂದ 44 ವರ್ಷದ ಒಳಗಿನವರಿಗೆ ಕೋವಿಡ್ ಲಸಿಕಾ ಶಿಬಿರ

- Advertisement -
- Advertisement -

ಮಾಣಿ : 21ನೇ ಜೂನ್ ಸೋಮವಾರ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯ ಉದ್ಯೋಗ ಚೀಟಿ ಹೊಂದಿರುವ 18 ರಿಂದ 44 ವರ್ಷದ ಒಳಗಿನವರಿಗೆ ಕೋವಿಡ್ ಲಸಿಕಾ ಶಿಬಿರ ನಡೆಯಲಿದೆ.
ವೇಳಾ ಪಟ್ಟಿ ಕೆಳಗಿನಂತಿದೆ
ಪೂರ್ವಾಹ್ನ ಗಂಟೆ 10ರಿಂದ: ಇಡ್ಕಿದು ಪಂಚಾಯತ್
ಪೂರ್ವಾಹ್ನ ಗಂಟೆ 11ರಿಂದ: ಅನಂತಾಡಿ ಪಂಚಾಯತ್
ಅಪರಾಹ್ನಗಂಟೆ 12ರಿಂದ: ನೆಟ್ಲಮುಡ್ನೂರು ಪಂಚಾಯತ್
ಅಪರಾಹ್ನ ಗಂಟೆ 2ರಿಂದ: ಮಾಣಿ ಪಂಚಾಯತ್.
ಲಸಿಕೆಗೆ ಬರುವ ಉದ್ಯೋಗ ಖಾತರಿ ಸದಸ್ಯರು ತಮ್ಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯವರಿಂದ ದೃಢಪತ್ರ ಮತ್ತು ತಮ್ಮ ಆಧಾರ್ ಕಾರ್ಡ್ ನ್ನು ತರಬೇಕು ಮತ್ತು ಪ್ರತೀ ಗ್ರಾಮದವರು ಕಡ್ಡಾಯವಾಗಿ ತಮಗೆ ನೀಡಿದ ಸಮಯಕ್ಕೆ ಸರಿಯಾಗಿ ಬರಬೇಕಾಗಿ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಮತ್ತು ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಶಶಿಕಲಾರವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!