Thursday, June 4, 2026
Homeಕರಾವಳಿಕೊಣಾಜೆಯಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಕೊಣಾಜೆಯಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

- Advertisement -
- Advertisement -

ಕೊಣಾಜೆ: ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿ ಸಮೀಪದ ಪಟ್ಟೋರಿ ಬಳಿ ನಡೆದಿದೆ. ನಿಡ್ಡೋಡಿ ಮೂಲದ ಸಂಗಮ್ ಶೆಟ್ಟಿ (26) ಮೃತ ದುರ್ದೈವಿ.

ನಿನ್ನೆ ರಾತ್ರಿ ಸಂಗಮ್ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಪಟ್ಟೋರಿಯ ಬಾಡಿಗೆ ಮನೆಯಲ್ಲಿ ಯುವಕನ ಸಂಬಂಧಿಕರು ವಾಸವಾಗಿದ್ದರು. ಅಲ್ಲಿಗೆ ಸಂಗಮ್ ಬಂದು ಹೋಗುತ್ತಿದ್ದರು ಎನ್ನಲಾಗಿದ್ದು,  ನಿನ್ನೆ ಅಲ್ಲಿಗೆ ಬಂದಿದ್ದ ಅವರು, ಮನೆಯಲ್ಲಿ ಇಲ್ಲದ ವೇಳೆ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ. ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!