Monday, May 6, 2024
Homeತಾಜಾ ಸುದ್ದಿರಾಜ್ಯಕ್ಕೆ ಎಂಟ್ರಿಕೊಟ್ಟ ಮತ್ತೊಂದು ಮಹಾಮಾರಿ!…ಚರ್ಮಗಂಟು ರೋಗಕ್ಕೆ ಹೈರಾಣಾದ ಮಲೆನಾಡು

ರಾಜ್ಯಕ್ಕೆ ಎಂಟ್ರಿಕೊಟ್ಟ ಮತ್ತೊಂದು ಮಹಾಮಾರಿ!…ಚರ್ಮಗಂಟು ರೋಗಕ್ಕೆ ಹೈರಾಣಾದ ಮಲೆನಾಡು

spot_img
- Advertisement -
- Advertisement -

ಶಿವಮೊಗ್ಗ: ಮಲೆನಾಡಿನ ಜಾನುವಾರುಗಳಲ್ಲಿ ಇತ್ತೀಚಿಗೆ ಕಾಣಿಸಿಕೊಂಡಿರುವ ಚರ್ಮಗಂಟು ರೋಗ ವ್ಯಾಪಕವಾಗುತ್ತಿದೆ. ಈ ಕಾಯಿಲೆಯ ವೈಜ್ಞಾನಿಕ ಹೆಸರು ಲುಂಪಿ ಸ್ಕಿನ್ ಡಿಸೀಸ್. ಪಾಕ್ಸ್ ವಿರಿಡೆ ಎಂಬ ವೈರಸ್​ನಿಂದ ಹರಡುವ ಚರ್ಮಗಂಟು ರೋಗ ಮಲೆನಾಡಿನ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪತ್ತೆಯಾಗಿದ್ದು ಕರೋನಾದಂತೆ ಈ ರೋಗ ನೇರ ಸಂಪರ್ಕದಿಂದಲೇ ಹರಡುತ್ತಿದೆ.

ರೋಗಗ್ರಸ್ತ ಜಾನುವಾರುಗಳಲ್ಲಿ ಶೇ.1 ರಿಂದ 5 ರಷ್ಟು ಜಾನುವಾರುಗಳು ಸಾವನ್ನಪ್ಪಲಿವೆ ಎಂದು ಎಚ್ಚರಿಸಿರುವ ಇಲಾಖೆ, ಜಾನುವಾರುಗಳಿಗೂ ಐಸೋಲೇಶನ್ ಮಾಡಲಾಗುತ್ತಿದೆ. ರೋಗ ಪತ್ತೆಯಾದ ಜಾಗದಲ್ಲಿ ಜಾತ್ರೆ, ಪಶು ಸಾಗಾಣಿಕೆ, ಪಶುಮೇಳ ನಿಷೇಧಿಸಲು ಇಲಾಖೆ ಸೂಚನೆ ನೀಡಿದೆ.
ಈ ಹಿಂದೆ ಆಫ್ರಿಕಾ, ರಷ್ಯಾ, ಯೂರೋಪ್ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದ ಚರ್ಮಗಂಟು ರೋಗ ಭಾರತದ ಕೇರಳ ಹಾಗೂ ಒರಿಶಾದಲ್ಲೂ ಪತ್ತೆಯಾಗಿತ್ತು. ಈಗ ಮಲೆನಾಡಿನ ಗ್ರಾಮಗಳ ಜಾನುವಾರುಗಳಲ್ಲಿ ಕಾಣಿಸಿಕೊಂಡಿದೆ. ರೋಗಗ್ರಸ್ತ ಜಾನುವಾರುಗಳನ್ನು ಗುಂಪಿನಿಂದ ಪ್ರತ್ಯೇಕವಾಗಿರಿಸಲು ಪಶುಪಾಲನಾ ಇಲಾಖೆ ಜಾಗೃತಿ ಮೂಡಿಸುತ್ತಿದೆ.

- Advertisement -
spot_img

Latest News

error: Content is protected !!