Thursday, June 4, 2026
Homeತಾಜಾ ಸುದ್ದಿಪ್ರೀತಿಸಿದಾಕೆಗೆ ಬೇರೊಬ್ಬನೊಂದಿಗೆ ನಿಶ್ಚಿತಾರ್ಥ: ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

ಪ್ರೀತಿಸಿದಾಕೆಗೆ ಬೇರೊಬ್ಬನೊಂದಿಗೆ ನಿಶ್ಚಿತಾರ್ಥ: ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

- Advertisement -
- Advertisement -

ಹಾವೇರಿ : ನಾಲ್ಕು ವರ್ಷಗಳಿಂದ ಪ್ರೀತಿಸಿದ್ದ ಆ ಇಬ್ಬರು ಯುವ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ತಾಲೂಕಿನ ನಾನೂರು ಗ್ರಾಮದಲ್ಲಿ ನಡೆದಿದೆ.

ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಇರ್ಷಾದ್ ಕುಡಚಿ ಹಾಗೂ ವಿದ್ಯಾಶ್ರೀ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇರ್ಷಾದ್ ಡಿಪ್ಲೋಮಾ ಮುಗಿಸಿದ್ದರೇ, ವಿದ್ಯಾಶ್ರೀ ಬಿಕಾಂ ಓದ್ತಾ ಇದ್ದರು. ಇಬ್ಬರು ಮದುವೆ ಆಗೋದಕ್ಕೂ ನಿರ್ಧರಿಸಿದ್ದರು. ಆದ್ರೇ.. ಇಬ್ಬರ ಪ್ರೀತಿಯನ್ನು ಕುಟುಂಬಸ್ಥರು ಒಪ್ಪಿಕೊಂಡಿರಲಿಲ್ಲ.

ಇದರ ಮಧ್ಯೆ ಯುವತಿ ವಿದ್ಯಾಶ್ರೀಗೆ ಮನೆಯವರು ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಇದರಿಂದಾಗಿ ಏಪ್ರಿಲ್ 24ರಂದು ಮನೆಯಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಮಹಿಳಾ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಆದ್ರೇ..ಇಂದು ಇರ್ಷಾದ್ ಕುಟುಂಬಕ್ಕೆ ಸೇರಿದ ಜಮೀನಿನಲ್ಲೇ ಇರ್ಷಾದ್ ಮತ್ತು ವಿದ್ಯಾಶ್ರೀ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

- Advertisement -

Latest News

error: Content is protected !!