Thursday, June 4, 2026
Homeತಾಜಾ ಸುದ್ದಿಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಆರೋಪ; ನನ್ನ ಮಗಳು ನನಗೆ ಬೇಕೆಂದು ಧರಣಿ ಕುಳಿತ ತಾಯಿ, ಬಜರಂಗದಳ...

ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಆರೋಪ; ನನ್ನ ಮಗಳು ನನಗೆ ಬೇಕೆಂದು ಧರಣಿ ಕುಳಿತ ತಾಯಿ, ಬಜರಂಗದಳ ಸಾಥ್

- Advertisement -
- Advertisement -

ಹುಬ್ಬಳ್ಳಿ : ಹಿಂದೂ ಹುಡುಗಿಯನ್ನು ಅನ್ಯಕೋಮಿನ ಹುಡುಗ ಅಪಹರಿಸಿದ್ದು, ದೂರು ನೀಡಿ ಐದು ದಿನಗಳಾದರೂ ಪೊಲೀಸರು ಆರೋಪಿ ವಿರುದ್ಧ ಕ್ರಮ ಜರುಗಿಸಿಲ್ಲವೆಂದು ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯ ಎದುರು ಬಜರಂಗದಳ, ವಿಶ್ವ ಹಿಂದು ಪರಿಷತ್ ಮತ್ತು ಹುಡುಗಿಯ ಪೋಷಕರು ಧರಣಿ ನಡೆಸಿದರು.


ಇದು ಲವ್ ಜಿಹಾದ್ ಕೃತ್ಯ, ಹುಡುಗನ ಕಡೆಯವರಿಗೆ ಪೊಲೀಸರು ಸಪೋರ್ಟ್ ಮಾಡುತ್ತಿದ್ದಾರೆ. ಒಂದು ಗಂಟೆಯೊಳಗೆ ಹುಡುಗಿಯನ್ನು ಪೊಲೀಸರು ಪೋಷಕರಿಗೆ ಒಪ್ಪಿಸದೇ ಇದ್ದರೆ ಚೆನ್ನಮ್ಮವೃತ್ತ ಬಂದ್ ಮಾಡಿ ಹುಬ್ಬಳ್ಳಿಗೆ ಬೆಂಕಿ ಹಚ್ಚುತ್ತೇವೆ. ಪರಿಸ್ಥಿತಿ ಕೈ ಮೀರುವ ಮುನ್ನ ಪೊಲೀಸರು ಹುಡುಗಿಯನ್ನು ಪೋಷಕರಿಗೆ ಒಪ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.


ಡಿಸಿಪಿ ಬಾಗ್ಲಾ ಅವರು ಮಾತುಕತೆ ನಡೆಸಿ ಧರಣಿ ಹಿಂಪಡೆಯಲು ಮಾಡಿದ ಮನವಿಗೆ ಧರಣಿ ನಿರತರು ಒಪ್ಪಲಿಲ್ಲ.

- Advertisement -

Latest News

error: Content is protected !!