Friday, June 5, 2026
Homeಕರಾವಳಿಪುತ್ತೂರಿನಲ್ಲಿ ಲವ್ ಜಿಹಾದ್ ಗೆ ಬಲಿಯಾಗಬೇಡಿ ಎಂಬ ಕಟೌಟ್ ಅಳವಡಿಕೆ

ಪುತ್ತೂರಿನಲ್ಲಿ ಲವ್ ಜಿಹಾದ್ ಗೆ ಬಲಿಯಾಗಬೇಡಿ ಎಂಬ ಕಟೌಟ್ ಅಳವಡಿಕೆ

- Advertisement -
- Advertisement -

ಪುತ್ತೂರು; ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಅರಣ್ಯ ಇಲಾಖೆಯ ಕಚೇರಿಯ ಎದುರು ಹಾಕಲಾಗಿದೆ.

ಲವ್ ಜಿಹಾದ್ ಗೆ ನೀವು  ಬಲಿಯಾಗಬೇಡಿ’ ಎಂದು ಡಾ.ಎಂ.ಕೆ.ಪ್ರಸಾದ್ ಅವರ ಹೆಸರಿನಲ್ಲಿ  ಕಟೌಟ್ ಅಳವಡಿಸಲಾಗಿದೆ.

ಹಿಂದೂ ಹುಡುಗಿ ಶ್ರದ್ಧಾಳ ಹತ್ಯೆ. ದೇಹವನ್ನು 35 ತುಂಡು ಮಾಡಿದರು. ಕಾರಣ ಲವ್ ಜಿಹಾದ್. ಇದಕ್ಕೆ ನೀವು ಬಲಿಯಾಗಬೇಡಿ’ ಎಚ್ಚರಿಸುವ ಕಟೌಟ್ ಅನ್ನು ವೈದ್ಯ, ಹಿಂದುತ್ವ ಪರ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಡಾ.ಎಂ.ಕೆ. ಪ್ರಸಾದ್ ಅವರ ಹೆಸರಿನಲ್ಲಿ ಅಳವಡಿಸಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಸಿರುವ ಎಂ. ಕೆ. ಪ್ರಸಾದ್’ ನಾನು ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧ ಅಲ್ಲ. ಆದರೆ, ನಮ್ಮ ಸುತ್ತಮುತ್ತಲ ಬೆಳವಣಿಗೆ ಬಗ್ಗೆ ಹದಿಹರೆಯದವರಿಗೆ ಅರಿವು ಇರಬೇಕು. ಬಣ್ಣದ ಆಮಿಷಗಳನ್ನು ಒಡ್ಡಿ ಏನೇನು ಮಾಡುತ್ತಾರೆ ಎಂಬುದೂ ಗೊತ್ತಿರಬೇಕು. ಅದಕ್ಕಾಗಿ ನಾನೇ ಈ ಫಲಕ ಹಾಕಿಸಿದ್ದೇನೆ. ಸ್ಥಳೀಯ ಎಲ್ಲಾ ಕಾಲೇಜುಗಳಿಗೂ ಭಿತ್ತಿಪತ್ರಗಳನ್ನು ಕಳುಹಿಸಿದ್ದೇನೆ. ಯಾವುದೇ ಸಂಘಟನೆ ಅಥವಾ ಸಂಘ-ಸಂಸ್ಥೆ ಪರವಾಗಿ ಮಾಡಿಲ್ಲ. ವೈಯಕ್ತಿಕ ಹೆಸರಿನಲ್ಲಿಯೇ ಕಳುಹಿಸಿದ್ದೇನೆ’ ಎಂದಿದ್ದಾರೆ.

- Advertisement -

Latest News

error: Content is protected !!