Saturday, June 6, 2026
Homeತಾಜಾ ಸುದ್ದಿಅಂಗವಿಕಲ ಭಿಕ್ಷುಕನ ಕೈಯಲ್ಲಿದ್ದ ಹಣವೆಷ್ಟು ಅಂದ್ರೆ ನೀವು ಬೆಚ್ಚಿ ಬೀಳ್ತೀರಾ !

ಅಂಗವಿಕಲ ಭಿಕ್ಷುಕನ ಕೈಯಲ್ಲಿದ್ದ ಹಣವೆಷ್ಟು ಅಂದ್ರೆ ನೀವು ಬೆಚ್ಚಿ ಬೀಳ್ತೀರಾ !

- Advertisement -
- Advertisement -

ಬೆಂಗಳೂರು: ಅಂಗವಿಕಲ ಭಿಕ್ಷುಕನ ಬಳಿ ಇದ್ದ ಕೊಳಕು ಬಟ್ಟೆ ಗಂಟು ಎಸೆಯುವಾಗ ಕಂತೆ ಕಂತೆ ಹಣ ಪತ್ತೆಯಾಗಿರುವ ಘಟನೆ ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ ಘಟನೆ ನಡೆದಿದೆ.

ಪ್ರತಿದಿನ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಅಂಗವಿಕಲ ರಂಗಸ್ವಾಮಯ್ಯ ಬಳಿ ಹಣ ಪತ್ತೆಯಾಗಿದೆ. ರಂಗಸ್ವಾಮಯ್ಯ ಭಿಕ್ಷೆ ಬೇಡಿದ ಹಣ ಹಾಗೂ ಅಂಗವಿಕಲ ವೇತನವನ್ನೂ ಬಳಸದೆ ಹಣವನ್ನು ಕೂಡಿಟ್ಟಿದ್ದು, ಸುಮಾರು 60 ಸಾವಿರ ರೂ. ಗಂಟಿನಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ರಂಗಸ್ವಾಮಯ್ಯನ ಹಣವನ್ನು ಗ್ರಾಮಸ್ಥರು ಬ್ಯಾಂಕ್ ಖಾತೆಗೆ ಹಾಕುವ ಮೂಲಕ ಹಣ ದುರ್ಬಳಕೆ ಆಗುವುದನ್ನು ತಡೆಯುವ ಚಿಂತನೆ ನಡೆಸಿದ್ದಾರೆ. ಅಲ್ಲದೇ ಅನಾಥಾಶ್ರಮಕ್ಕೆ ಸೇರಿಸುವ ಯೋಚನೆಯನ್ನು ಮಾಡಿದ್ದಾರೆ.

- Advertisement -

Latest News

error: Content is protected !!