Thursday, June 4, 2026
Homeಕರಾವಳಿಉಡುಪಿಬ್ರಹ್ಮಾವರ: ಹೋಟೆಲ್ ವ್ಯವಹಾರದಲ್ಲಿ ನಷ್ಟ: ಮನನೊಂದ ಉದ್ಯಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬ್ರಹ್ಮಾವರ: ಹೋಟೆಲ್ ವ್ಯವಹಾರದಲ್ಲಿ ನಷ್ಟ: ಮನನೊಂದ ಉದ್ಯಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ಬ್ರಹ್ಮಾವರ: ಹೋಟೆಲ್ ವ್ಯವಹಾರದಲ್ಲಿ ನಷ್ಟ ಉಂಟಾಗಿ ಮನನೊಂದ ಉದ್ಯಮಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಾಡಿ ಗ್ರಾಮದ ಗಾಂಧಿ ನಗರ ಎಂಬಲ್ಲಿ ನಡೆದಿದೆ.

ಮೃತರನ್ನು ಗಾಂಧಿ ನಗರ ನಿವಾಸಿ ಪ್ರಭಾಕರ್ ಶೆಟ್ಟಿಗಾರ್ ಎಂಬವರ ಪುತ್ರ ಪ್ರಥ್ವಿರಾಜ್ ಎಂದು ಗುರುತಿಸಲಾಗಿದೆ. ಪ್ರಥ್ವಿರಾಜ್ ಒಂದೂವರೆ ವರ್ಷದ ಹಿಂದೆ ಹಾಸನದಲ್ಲಿ ಸುಮಾರು 14 ಲಕ್ಷ ಖರ್ಚು ಮಾಡಿ ಹೋಟೆಲ್ ವ್ಯವಹಾರ ಆರಂಭಿಸಿದ್ದ, ಆದರೆ ಸಂಪೂರ್ಣ ನಷ್ಟಗೊಂಡ ಕಾರಣ ಕಳೆದ 6 ತಿಂಗಳಿನಿಂದ ಮನೆಯಲ್ಲೇ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು,ವ್ಯವಹಾರದ ನಷ್ಟದಿಂದ ಖಿನ್ನತೆಗೊಳಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!