Thursday, June 4, 2026
Homeಕರಾವಳಿಮಂಗಳೂರುಚಾರ್ಮಾಡಿ ಘಾಟ್‌ನಲ್ಲಿ ರಸ್ತೆ ಮಧ್ಯೆ ಬಾಕಿಯಾದ 16 ಚಕ್ರದ ಲಾರಿ ; ಲಾರಿ ಚಾಲಕನ ಯಡವಟ್ಟಿನಿಂದ...

ಚಾರ್ಮಾಡಿ ಘಾಟ್‌ನಲ್ಲಿ ರಸ್ತೆ ಮಧ್ಯೆ ಬಾಕಿಯಾದ 16 ಚಕ್ರದ ಲಾರಿ ; ಲಾರಿ ಚಾಲಕನ ಯಡವಟ್ಟಿನಿಂದ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್

- Advertisement -
- Advertisement -

ಚಾರ್ಮಾಡಿ ಘಾಟ್‌ನಲ್ಲಿ ರಸ್ತೆ ಮಧ್ಯೆ 16 ಚಕ್ರದ ಲಾರಿ ಬಾಕಿಯಾದ ಪರಿಣಾಮ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.ಚಾರ್ಮಾಡಿ ಘಾಟ್‌ನ 16ನೇ ತಿರುವಿನಲ್ಲಿ 16 ಚಕ್ರದ ಲಾರಿ ಟರ್ನ್ ಆಗದೇ ರಸ್ತೆ ಮಧ್ಯೆ ನಿಂತಿದ್ದು, ಮುಂಜಾನೆಯಿಂದಲೂ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಲಾರಿ ಚಾಲಕನ ಯಡವಟ್ಟಿನಿಂದ ವಾಹನ ಸವಾರರು ಪರದಾಡುವಂತಾಗಿದೆ. ಚಾರ್ಮಾಡಿ ಘಾಟ್‌ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, .ಲಾರಿ ಮುಂದೆಯೂ ಹೋಗಲಾಗದೇ ಹಿಂದೆಯೂ ಹೋಗಲಾಗದೇ ರಸ್ತೆ ಮಧ್ಯೆಯೇ ನಿಂತಿದೆ.

ಇನ್ನು ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಿಸುವ ಚಾರ್ಮಾಡಿ ಘಾಟ್‌ನಲ್ಲಿ12-14 ಚಕ್ರದ ಲಾರಿ ಸಂಚಾರಕ್ಕೆ ನಿಷೇಧ ಇದೆ. ಆದರೂ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಮೂಲಕ ಲಾರಿ ಹೋಗಿದೆ. ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಇದ್ದರೂ ಲಾರಿ ಹೋಗಲು ಅನುಮತಿ ಕೊಟ್ಟಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!