Friday, May 3, 2024
Homeಕರಾವಳಿಸುಳ್ಯ; ಕೊಡಗು ದಕ್ಷಿಣಕನ್ನಡ ಗಡಿ ಭಾಗದಲ್ಲಿ ನಕ್ಸಲರು ಪ್ರತ್ಯಕ್ಷ

ಸುಳ್ಯ; ಕೊಡಗು ದಕ್ಷಿಣಕನ್ನಡ ಗಡಿ ಭಾಗದಲ್ಲಿ ನಕ್ಸಲರು ಪ್ರತ್ಯಕ್ಷ

spot_img
- Advertisement -
- Advertisement -

ಸುಳ್ಯ; ಕೊಡಗು ದಕ್ಷಿಣಕನ್ನಡ ಗಡಿ ಭಾಗದಲ್ಲಿ ನಕ್ಸಲರು ಪ್ರತ್ಯಕ್ಷ ವಾಗಿದ್ದಾರೆ ಎನ್ನಲಾಗಿದೆ.ಮಡಿಕೇರಿ ತಾಲೂಕು ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ನಕ್ಸಲರು ಕಾಣಿಸಿಕೊಂಡಿದ್ದಾರೆ.
8 ಜನರ ನಕ್ಸಲ್ ತಂಡ ಮಾ.16ರಂದು ಸಂಜೆ ಕೂಜಿಮಲೆ, ಕಲ್ಮುಖರ್  ಅಂಗಡಿಯೊಂದರಿಂದ 3500 ಸಾವಿರದಷ್ಟು ದಿನಸಿ ಖರೀದಿಸಿದ್ದಾರೆ.ನಗದು ಹಣ ನೀಡಿ ಸಾಮಗ್ರಿಗಳನ್ನು  ಖರೀದಿಸಿದ ನಕ್ಸಲರ ತಂಡದಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ ಇರಬಹುದಾದ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇನ್ನು 2012 ರಲ್ಲಿ  ಕಾಲೂರು ಗ್ರಾಮದಲ್ಲಿ ಪ್ರತ್ಯಕ್ಷಗೊಂಡಿದ್ದರು. ನಂತರ 2018 ರಫೆಬ್ರವರಿ ತಿಂಗಳಿನಲ್ಲಿ ಇದೆ ವ್ಯಾಪ್ತಿ ಸಂಪಾಜೆ ಗುಡ್ಡೆಗದ್ದೆಯಲ್ಲಿ ನಕ್ಸಲರು ಪ್ರತ್ಯಕ್ಷಗೊಂಡಿದ್ದರು. ಲೋಕಸಭಾ ಚುನಾವಣೆಯ ಸಂದರ್ಭ ಪ್ರತಿ ಬಾರಿಯೂ ಕೂಡ ಕೊಡಗು ಜಿಲ್ಲೆಯ ಗಡಿ ಪ್ರದೇಶದಲ್ಲಿ ನಕ್ಸಲರ ಚಲನವಲನಗಳು ಗೋಚರಿಸುತ್ತದೆ. ಚುನಾವಣೆಯ ಸಂದರ್ಭ ಮಾಮವಾದಿಗಳು ಗ್ರಾಮೀಣ ಪ್ರದೇಶದಲ್ಲಿರುವ, ಅರಣ್ಯ, ಬೆಟ್ಟಗುಡ್ಡ ಪ್ರದೇಶದಲ್ಲಿ ಹೊಂದಿಕೊಂಡಿರುವ ಮತದಾರರನ್ನು ದಿಕ್ಕು ತಪ್ಪಿಸುವ ಸಲುವಾಗಿ ಪ್ರತ್ಯಕ್ಷವಾಗುತ್ತಾರೆ ಎನ್ನಲಾಗುತ್ತಿದೆ.

- Advertisement -
spot_img

Latest News

error: Content is protected !!