Saturday, May 4, 2024
Homeಕರಾವಳಿಮಂಗಳೂರಿನ ಕಂಕನಾಡಿಯಲ್ಲಿ ಮಾರ್ಕೆಟ್ ಗೆ ನುಗ್ಗಿದ ಲಾರಿ; ಹಲವು ವಾಹನಗಳು ಜಖಂ

ಮಂಗಳೂರಿನ ಕಂಕನಾಡಿಯಲ್ಲಿ ಮಾರ್ಕೆಟ್ ಗೆ ನುಗ್ಗಿದ ಲಾರಿ; ಹಲವು ವಾಹನಗಳು ಜಖಂ

spot_img
- Advertisement -
- Advertisement -

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವ ಲಾರಿಯೊಂದು ಚಾಲಕನ ನಿರ್ಲಕ್ಷ್ಯ ದಿಂದಾಗಿ ಅಂಗಡಿಗೆ ನುಗ್ಗಿ, ಹಲವು ವಾಹನಗಳು ಲಾರಿಯಡಿಗೆ ಬಿದ್ದು ಜಖಂಗೊಂಡಿರುವ  ಘಟನೆ ನಗರದ ಕಂಕನಾಡಿ ಮಾರ್ಕೆಟ್ ನಲ್ಲಿ ನಡೆದಿದೆ.

ಈ ಅಪಘಾತದಲ್ಲಿ ಮೂರು ಕಾರು, ಟೆಂಪೋ, ಬೈಕ್ ಹಾಗೂ ಎರಡು ಅಂಗಡಿಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಕ್ರೇನ್ ಮೂಲಕ ಲಾರಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.

 ಚಾಲಕನ ದಿವ್ಯ ನಿರ್ಲಕ್ಷ್ಯವೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಈತ ಲಾರಿಯನ್ನು ನಿಲ್ಲಿಸಿ, ಕೆಳಗಿಳಿದು ಮೊಬೈಲ್ ನಲ್ಲಿ ಮಾತನಾಡುವುದರಲ್ಲಿಯೇ ತಲ್ಲೀನನಾಗಿದ್ದ.  ಆಗ ಚಾಲನಾ ಸ್ಥಿತಿಯಲ್ಲಿದ್ದ ಲಾರಿ ವೇಗವಾಗಿ ಮುಂದಕ್ಕೆ ಚಲಿಸಿ, ವಾಹನಗಳ ಸಹಿತ ಅಂಗಡಿಗೆ ಡಿಕ್ಕಿಯಾಗಿದೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ತಿಳಿಸಿದ್ದಾರೆ. ಸಿ.ಸಿ. ಕ್ಯಾಮೆರಾದಲ್ಲೂ ಈ ಅವಘಡದ ಚಿತ್ರಣ ದಾಖಲಾಗಿದೆ.

- Advertisement -
spot_img

Latest News

error: Content is protected !!