Monday, April 29, 2024
Homeಕರಾವಳಿವಿಟ್ಲದಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ 20 ಅಡಿ ಪ್ರಪಾತಕ್ಕೆ ಬಿದ್ದ ಮಹಿಳೆ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು...

ವಿಟ್ಲದಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ 20 ಅಡಿ ಪ್ರಪಾತಕ್ಕೆ ಬಿದ್ದ ಮಹಿಳೆ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ

spot_img
- Advertisement -
- Advertisement -

ವಿಟ್ಲ: ಸ್ಕೂಟಿಯಲ್ಲಿ  ತೆರಳುತ್ತಿದ್ದ ವೇಳೆ ಮಹಿಳೆಯೊಬ್ಬರು 20 ಅಡಿ ಪ್ರಪಾತಕ್ಕೆ ಉರುಳಿ ಬಿದ್ದು ಭಾರೀ ಅಪಾಯದಿಂದ ಪವಾಡ ಸದೃಶ ಪಾರಾಗಿರುವ ಘಟನೆ ವಿಟ್ಲದಲ್ಲಿ ನಡೆದಿದೆ.

ವಿಟ್ಲದ ಉಕ್ಕುಡ ನಿವಾಸಿ ಮೋಹಿನಿ ಎಂಬುವರು ತನ್ನ ಸ್ಕೂಟಿಯಲ್ಲಿ ಬೆಳಿಗ್ಗೆ 6.30ರ ಸುಮಾರಿಗೆ ಉಕ್ಕುಡದಿಂದ ವಿಟ್ಲ ಕಡೆಗೆ ಸಾಗುತ್ತಿದ್ದರು.  ಕಾಶಿಮಠ ತಿರುವಿನಲ್ಲಿ ಸಾಗುತ್ತಿದ್ದಾಗ, ಹಿಂದೆ ಬಂದ ಬೈಕ್ ಒಂದು ಓವರ್ ಟೇಕ್ ಮಾಡೋದಕ್ಕೆ ಮುಂದಾಗಿದೆ. ಈ ವೇಳೆ ಕ್ರಾಸ್ ನಲ್ಲಿ ಸ್ಕೂಟಿಯ ನಿಯಂತ್ರಣ ಕಳೆದುಕೊಂಡು ಬಿದ್ದು ಬಿಟ್ಟಿದ್ದಾರೆ.  ಪುನಃ  ಸುಧಾರಿಸಿಕೊಂಡು  ಸ್ಕೂಟಿ ಎತ್ತಿದಾಗ ತಿರುವಿದ ಎಕ್ಸಲೇಟರ್ ನಿಂದಾಗಿ ಪಕ್ಕದಲ್ಲೇ ಇದ್ದಂತ 20 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾರೆ.

ಆಕೆ ಬಿದ್ದದ್ದನ್ನು ಆಕೆಯ ಹಿಂದೆ ಬರುತ್ತಿದ್ದಂತ ಮತ್ತೊಬ್ಬ ಬೈಕ್ ಸವಾರ ಗಮನಿಸಿದ್ದಾರೆ. ಕೂಡಲೇ ರಸ್ತೆಯಲ್ಲಿ ಸಾಗುತ್ತಿದ್ದಂತ ವಾಹನಗಳಲ್ಲಿನ ಜನರನ್ನು ಸಹಾಯಕ್ಕೆ ಕರೆದಿದ್ದಾರೆ. ಬಳಿಕ ಪ್ರಪಾತಕ್ಕೆ ಬಿದ್ದಂತ ಆಕೆಯನ್ನು ಜನರು ಕೂಡಲೇ ರಕ್ಷಿಸಿದ್ದಾರೆ.  ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ವಿಡಿಯೋ ನೋಡಿದ ಮಂದಿ ಆಕೆ ಬದುಕಿದ್ದು ನಿಜಕ್ಕೂ ಅಚ್ಚರಿ ಎನ್ನುತ್ತಿದ್ದಾರೆ.

- Advertisement -
spot_img

Latest News

error: Content is protected !!