Sunday, June 7, 2026
Homeಕರಾವಳಿಕಾಸರಗೋಡುಕಾಸರಗೋಡು : ಚಲಿಸುತ್ತಿದ್ದ ಲಾರಿ ಕ್ಷಣಾರ್ಧದಲ್ಲಿ ಅಗ್ನಿಗಾಹುತಿ; ಚಾಲಕ ಪ್ರಾಣಾಪಾಯದಿಂದ ಪಾರು

ಕಾಸರಗೋಡು : ಚಲಿಸುತ್ತಿದ್ದ ಲಾರಿ ಕ್ಷಣಾರ್ಧದಲ್ಲಿ ಅಗ್ನಿಗಾಹುತಿ; ಚಾಲಕ ಪ್ರಾಣಾಪಾಯದಿಂದ ಪಾರು

- Advertisement -
- Advertisement -

ಕಾಸರಗೋಡು: ಲಾರಿಯೊಂದು ಅಗ್ನಿಗಾಹುತಿಯಾದ ಘಟನೆ ಇಂದು ಮಧ್ಯಾಹ್ನ ಪೆರ್ಲ ಸಮೀಪದ ನಲ್ಕದಲ್ಲಿ ನಡೆದಿದೆ.


ವಿಟ್ಲ ಕಡೆಯಿಂದ ಬದಿಯಡ್ಕಕ್ಕೆ ಜಲ್ಲಿ ಹೇರಿಕೊಂಡು ಹೋಗುತ್ತಿದ್ದ ಲಾರಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಚಾಲಕ ಲಾರಿಯನ್ನು ನಿಲ್ಲಿಸಿದ್ದು, ಕ್ಷಣಾರ್ಧದಲ್ಲಿ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ.


ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಸ್ಥಳಕ್ಕೆ ತಲುಪಿದ ಅಗ್ನಿ ಶಾಮಕ ದಳ ಸಿಬ್ಬಂದಿ ಹೆಚ್ಚಿನ ಅನಾಹುತ ತಪ್ಪಿಸಿದರು. ಲಾರಿಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!