Sunday, June 7, 2026
Homeತಾಜಾ ಸುದ್ದಿಹೋಟೆಲ್ ರೂಮ್ ನಲ್ಲೆ ನಿಗೂಢವಾಗಿ ಸಾವನ್ನಪ್ಪಿದ್ದ ಲೋಕಸಭಾ ಸಂಸದ

ಹೋಟೆಲ್ ರೂಮ್ ನಲ್ಲೆ ನಿಗೂಢವಾಗಿ ಸಾವನ್ನಪ್ಪಿದ್ದ ಲೋಕಸಭಾ ಸಂಸದ

- Advertisement -
- Advertisement -

ಮುಂಬೈ: ಮಹಾನಗರದ ದಾದ್ರಾ ಮತ್ತು ನಗರ್ ಹವೇಲಿ ಕ್ಷೇತ್ರದ ಪಕ್ಷೇತರ ಸಂಸದ 58 ವರ್ಷದ ಮೋಹನ್ ದೇಲ್ಕರ್ ಹೋಟೆಲ್ ಕೊಠಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಇವರು ಮುಂಬೈನ ಮರೆನ್ ಡ್ರೈವ್ ಸೀ ಗ್ರೀನ್ ಹೋಟೆಲ್ನಲ್ಲಿ ತಂಗಿದ್ದ ವೇಳೆ ಸಾವಿಗೀಡಾಗಿದ್ದು, ಸ್ಥಳದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದೆ. ಸಾವಿಗೆ ನಿಖರ ಕಾರಣ ಮತ್ತು ಆತ್ಮಹತ್ಯೆಯೋ ಕೊಲೆಯೋ ಎಂದು ಮರಣೋತ್ತರ ಪರೀಕ್ಷೆಯ ನಂತರ ತಿಳಿದುಬರಬೇಕಾಗಿದೆ.

ಮೋಹನ್ ದೇಲ್ಕರ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿ ಏಳು ಬಾರಿಗೆ ಸಂಸದರಾಗಿದ್ದ ಸಂಸದರಾಗಿದ್ದ ಮೋಹನ್ ದೇಲ್ಕರ್, ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ದಾದ್ರಾ ಮತ್ತು ನಗರ್ ಹವೇಲಿ ಕ್ಷೇತ್ರದ ಸಂಸದರಾಗಿದ್ದಾರೆ.

- Advertisement -

Latest News

error: Content is protected !!