Friday, March 29, 2024
Homeಕರಾವಳಿಬಿಜೆಪಿ ಸರಕಾರಕ್ಕೆ ತಾಕತ್ತಿದ್ದರೆ PFI, SDPI ಸಂಘಟನೆಗಳನ್ನ ಬ್ಯಾನ್​ ಮಾಡಲಿ: ಮಂಗಳೂರಿನಲ್ಲಿ ಸಿದ್ದರಾಮಯ್ಯ ಸವಾಲ್

ಬಿಜೆಪಿ ಸರಕಾರಕ್ಕೆ ತಾಕತ್ತಿದ್ದರೆ PFI, SDPI ಸಂಘಟನೆಗಳನ್ನ ಬ್ಯಾನ್​ ಮಾಡಲಿ: ಮಂಗಳೂರಿನಲ್ಲಿ ಸಿದ್ದರಾಮಯ್ಯ ಸವಾಲ್

spot_img
- Advertisement -
- Advertisement -

ಮಂಗಳೂರು: ಸರ್ವಧರ್ಮ ಸಮನ್ವಯದ ನೆಲೆಯಾಗಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಕೋಮುವಾದದ ಪ್ರಯೋಗಶಾಲೆ ಮಾಡಿರುವ ಬಿಜೆಪಿ ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತಿ ಅಪನಂಬಿಕೆಯ ವಾತಾವರಣ ಸೃಷ್ಟಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಂಗಳೂರಿನ ಪುರಭವನದಲ್ಲಿ ನಡೆಯುತ್ತಿರುವ ಭಾವೈಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು ಸಂಘ ಪರಿವಾರದ ವಿರುದ್ಧ ಗುಡುಗಿದ ಅವರು PFI,SDPI ಯವರ ಮಾತುಗಳನ್ನು ಕೇಳೋಕೆ ಹೋಗಬೇಡಿ ಇವರು ಬಿಜೆಪಿಯ B ಟೀಂ. ಸರ್ಕಾರವೇ PFI ಗೆ ರ್ಯಾಲಿ ನಡೆಸಲು ಅನುಮತಿ ಕೊಟ್ಟು ಇದೀಗ ಎರಡೂ ಸಂಘಟನೆಗಳನ್ನ ಬ್ಯಾನ್​ ಮಾಡಲೇಬೇಕು ಎಂಬ ಹೇಳಿಕೆಗಳನ್ನು ಕೆಲ ಬಿಜೆಪಿ ನಾಯಕರು ನೀಡುತ್ತಿದ್ದಾರೆ. PFI ಮತ್ತು SDPI ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರ ನಮ್ಮ ಬಳಿಯಿದೆ ಎಂದು ಹಲವು ಬಿಜೆಪಿ ನಾಯಕರು ಹೇಳಿದ್ದಾರೆ. ಹೀಗಿರುವಾಗ ರಾಜ್ಯ ಸರ್ಕಾರವು ಅವರದ್ದೇ ಕೇಂದ್ರಕ್ಕೆ ಇವೆಲ್ಲವನ್ನು ನೀಡಿ ಎರಡೂ ಸಂಘಟನೆಗಳನ್ನು ಬ್ಯಾನ್​ ಮಾಡಿಸಲಿ ಎಂದು ಸಿದ್ದರಾಮಯ್ಯ ಸವಾಲ್​ ಹಾಕಿದ್ದಾರೆ.

ಈಗ ರಾಜ್ಯ ಮತ್ತು ಕೇಂದ್ರದಲ್ಲಿ BJP ಪಕ್ಷವೇ ಅಧಿಕಾರದಲ್ಲಿರುವುದು. ಹಾಗಾಗಿ, ಒಂದು ವೇಳೆ, ಇವರು PFI ಹಾಗೂ SDPIನ ಬ್ಯಾನ್​ ಮಾಡೋಕೆ ಮುಂದಾದರೆ ನಾವು ವಿರೋಧಿಸುವುದಿಲ್ಲ. ಆದರೆ, ಬಿಜೆಪಿಯವರಿಗೆ PFI ಹಾಗೂ SDPIನ ಬ್ಯಾನ್​ ಮಾಡುವ ಯಾವುದೇ ಆಸಕ್ತಿಯಿಲ್ಲ. ತಮ್ಮ ಅನುಕೂಲಕ್ಕಾಗಿ ಬಿಜೆಪಿಯವರು ಈ ಎರಡು ಸಂಘಟನೆಗಳನ್ನು ಪೋಷಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

“ರಾಜ್ಯ ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರ ಅನುದಾನವನ್ನು ₹3 ಸಾವಿರ ಕೋಟಿಯಿಂದ ₹800 ಕೋಟಿಗೆ ಇಳಿಕೆ ಮಾಡಿದೆ. ನಾನು ಅಧಿಕಾರಕ್ಕೆ ಬಂದರೆ ₹10 ಸಾವಿರ ಕೋಟಿಗೆ ಏರಿಸುತ್ತಿದ್ದೆ. ದೇಶದಲ್ಲಿ ಬಿಜೆಪಿಯವರೇ ಶೇ 90ರಷ್ಟು ಬೀಫ್‌ ವ್ಯಾಪಾರ ಮಾಡುತ್ತಿದ್ದು, ಅದರ ಆಮದು–ರಫ್ತು ನಿಷೇಧ ಮಾಡುತ್ತಿಲ್ಲ. ಆದರೆ, ಗೋ ಹತ್ಯೆ ನಿಷೇಧ ಕಾಯ್ದೆ ಮೂಲಕ ರೈತರು ಹಾಗೂ ಅಲ್ಪಸಂಖ್ಯಾತರನ್ನು ಹೊಡೆಯುವ ಹುನ್ನಾರ ನಡೆಸಿದ್ದಾರೆ” ಎಂದು ಆರೋಪಿಸಿದರು.

- Advertisement -
spot_img

Latest News

error: Content is protected !!