Friday, April 26, 2024
Homeತಾಜಾ ಸುದ್ದಿಸರ್ಕಾರದಿಂದ ಕ್ಷಣಕ್ಕೊಂದು ನಿರ್ಧಾರ : ಇಂದಿನಿಂದ ಅಗತ್ಯವಸ್ತುಗಳ ಖರೀದಿಗೆ ವಾಹನ ಬಳಕೆಗೆ ಅಸ್ತು

ಸರ್ಕಾರದಿಂದ ಕ್ಷಣಕ್ಕೊಂದು ನಿರ್ಧಾರ : ಇಂದಿನಿಂದ ಅಗತ್ಯವಸ್ತುಗಳ ಖರೀದಿಗೆ ವಾಹನ ಬಳಕೆಗೆ ಅಸ್ತು

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್​ಡೌನ್​ ಜಾರಿಯಾಗಿರುವ ಹಿನ್ನೆಲೆ ವಾಹನಗಳು ರಸ್ತೆಗಿಳಿಯುವಂತಿಲ್ಲ ಎಂದು ಸರ್ಕಾರ ಆದೇಶಿಸಿತ್ತು. ಆದರೆ ಇದೀಗ ಅಗತ್ಯ ವಸ್ತುಗಳ ಖರೀದಿಗೆ ವಾಹನ ಬಳಸಬಹುದು ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, ನಗರ ಪ್ರದೇಶಗಳಲ್ಲಿ ಸಮೀಪದ ಅಂಗಡಿಗಳಲ್ಲಿ ಅಗತ್ಯವಸ್ತು ಖರೀದಿಸಬಹುದು. ಹಳ್ಳಿ ಪ್ರದೇಶದಲ್ಲಿ ಸಮೀಪದ ನಗರಕ್ಕೆ ಹೋಗಿ ಅಗತ್ಯವಸ್ತು ಖರೀದಿಸಲು ವಾಹನ ಬಳಕೆ ಮಾಡಬಹುದು. ಸೌಲಭ್ಯ ಉಪಯೋಗಿಸಿ ಆದ್ರೆ ಪ್ರತಿನಿತ್ಯ ಅನಗತ್ಯವಾಗಿ ಸಂಚರಿಸಬೇಡಿ. ಮನೆಯಲ್ಲೇ ಇರಿ ಸುರಕ್ಷವಾಗಿರಿ ಎಂದು ತಿಳಿಸಿದ್ದಾರೆ.

ಇನ್ನು ಅನಗತ್ಯ ಓಡಾಟಕ್ಕೆ ಬ್ರೇಕ್​ ಹಾಕಲು ಪೊಲೀಸ್​ ಇಲಾಖೆ ಹರ ಸಾಹಸ ಪಡುತ್ತಿದ್ದು, ಅನಾವಶ್ಯಕವಾಗಿ ರಸ್ತೆಗಳಿದವರ ವಾಹನಗಳನ್ನು ಸೀಜ್​ ಮಾಡುತ್ತಿದ್ದಾರೆ.

- Advertisement -
spot_img

Latest News

error: Content is protected !!