ನವದೆಹಲಿ: ಕೇಂದ್ರ ಗೃಹ ಇಲಾಖೆ ಲಾಕ್ಡೌನ್ನಿಂದಾಗಿ ಬೇರೆ ಬೇರೆ ಕಡೆ ಸಿಲುಕಿಕೊಂಡವರಿಗೆ ತಮ್ಮ ತಮ್ಮ ಸ್ವ ಗ್ರಾಮಕ್ಕೆ ತೆರಳಲು ಅನುಮತಿ ನೀಡಿದೆ.
ಕೇಂದ್ರ ಸರ್ಕಾರ ಈ ಕುರಿತು ಪ್ರಕಟಣೆ ಹೊರಡಿಸಿದ್ದು ಅದರಲ್ಲಿ ಎಲ್ಲಾ ರಾಜ್ಯಗಳಿಗೆಆ ಬಗ್ಗೆ ಸೂಚನೆ ನೀಡಿದೆ. ಆ ಸೂಚನೆಗಳು ಈ ಕೆಳಗಿನಂತಿವೆ.
1. ಎಲ್ಲಾ ರಾಜ್ಯಗಳು ವಲಸಿಗರನ್ನು ಕಳುಹಿಸಿಕೊಡುವಾಗ ನೋಡಲ್ ಅಧಿಕಾರಿಗಳ ಮಾರ್ಗಸೂಚಿಯನ್ನು ಅನುಸರಿಸಬೇಕು.
2. ವಲಸಿಗರು ಗುಂಪು ಗುಂಪಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸುವುದಾದರೆ ಎರಡೂ ರಾಜ್ಯಗಳು ಮಾತುಕತೆ ನಡೆಸಿ ರಸ್ತೆಗಳಲ್ಲಿ ಸಂಚರಿಸಲು ಅನುಕೂಲ ಮಾಡಿಕೊಡಬೇಕು.
3. ಪ್ರಯಾಣ ಬೆಳೆಸುವವರು ಸೋಂಕು ತಗುಲಿದೆಯೋ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳಬೇಕು.
4. ಜನರನ್ನು ಗುಂಪು ಗುಂಪಾಗಿ ಸಾಗಿಸಲು ಬಸ್ಗಳನ್ನು ಬಳಸಿಕೊಳ್ಳಬಹುದು. ಬಸ್ಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಿರಬೇಕು ಮತ್ತು ಸೋಷಿಯಕ್ ಡಿಸ್ಟೆನ್ಸ್ ಕಾಪಾಡಿಕೊಳ್ಳಬೇಕು.
5. ಹೊರರಾಜ್ಯದಿಂದ ಬಂದವರನ್ನು ಅವರವರ ರಾಜ್ಯಗಳಿಗೆ ಕಳುಹಿಸುವುದು ಆಯಾ ರಾಜ್ಯಗಳ ಜವಾಬ್ದಾರಿಯಾಗಿರುತ್ತದೆ.
6. ಹೊರರಾಜ್ಯದಿಂದ ಬಂದಿಳಿದವರನ್ನು ಸ್ಥಳೀಯ ಆರೋಗ್ಯ ಇಲಾಖೆ ಪರೀಕ್ಷಿಸಬೇಕು, ಮತ್ತು ಹೋಮ್ ಕ್ವಾರಂಟೈನ್ನಲ್ಲಿ ಇರಿಸಬೇಕು. ಅಗತ್ಯ ಬಿದ್ದಲ್ಲಿ ಇನ್ಸ್ಟಿಟ್ಯೂಟ್ ಕ್ವಾರಂಟೈನ್ನಲ್ಲಿ ಇರಿಸತಕ್ಕದ್ದು. ಹೀಗೆ ಇರಿಸಿದವರನ್ನು ಆಗಾಗ್ಗೆ ಪರೀಕ್ಷೆಗೊಳಿಸುವುದು.
ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳೂ ಈ ಉದ್ದೇಶಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಹಾಗೂ ಈ ರೀತಿಯಾಗಿ ಹೊರ ರಾಜ್ಯಗಳಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಅಲ್ಲಿಂದ ಕಳುಹಿಸಿಕೊಡಲು ಹಾಗೂ ತಮ್ಮ ಸ್ವಂತ ಪ್ರದೇಶದಲ್ಲಿ ಬರಮಾಡಿಕೊಳ್ಳಲು ಸೂಕ್ತ ನಿಯಮಾವಳಿಗಳನ್ನು ರೂಪಿಸುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಸರಕಾರಗಳಿಗೆ ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿದೆ.