Friday, June 2, 2023
Homeಕರಾವಳಿಮಲಗಿದ್ದಲ್ಲೇ ಬಂಟ್ವಾಳದ ಮಾಜಿ ಯೋಧನ ನಿಧನ: 5 ದಿನಗಳ ಬಳಿಕ ವಿಚಾರ ಬೆಳಕಿಗೆ !

ಮಲಗಿದ್ದಲ್ಲೇ ಬಂಟ್ವಾಳದ ಮಾಜಿ ಯೋಧನ ನಿಧನ: 5 ದಿನಗಳ ಬಳಿಕ ವಿಚಾರ ಬೆಳಕಿಗೆ !

- Advertisement -
- Advertisement -

ಬಂಟ್ವಾಳ: ಮಾಜಿ ಸೈನಿಕರೊಬ್ಬರು ಮನೆಯಲ್ಲಿ ಮಲಗಿದ್ದಲ್ಲೇ ಮೃತಪಟ್ಟಿದ್ದು 5 ದಿನಗಳ ಬಳಿಕ ವಿಚಾರ ಬೆಳಕಿಗೆ ಬಂದ ಘಟನೆ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಪಲ್ಲೊಟ್ಟು ಎಂಬಲ್ಲಿ ನಡೆದಿದೆ.

ಮಾಜಿ ಸೈನಿಕ ಅವಿವಾಹಿತ ರಿಚಾರ್ಡ್ ಫೆರ್ನಾಂಡಿಸ್(50) ಮೃತಪಟ್ಟವರು.

ಶನಿವಾರ ರಾತ್ರಿ ಮಲಗಿದ್ದ ಬಳಿಕ ಇಂದಿನವರೆಗೆ ಮೃತ ರಿಚಾರ್ಡ್ ಎದ್ದಿರಲಿಲ್ಲ. ದಿನ ನಿತ್ಯ ಇವರು ಹತ್ತಿರದ ಹಾಲಿನ ಡೈರಿಗೆ ಹಾಲು ಕೊಂಡು ಹೋಗುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಹಾಲಿನ ಡೈರಿಗೆ ಬರದೇ ಇರುವುದನ್ನು ಗಮನಿಸಿ ಮನೆಯತ್ತ ಸ್ಥಳೀಯರು ಬಂದು ಗಮನಿಸಿದ ಸಂದರ್ಭದಲ್ಲಿ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಇಂದು ನೆರೆಮನೆಯವರು ಮನೆಯೊಳಗೆ ಹೋಗುತ್ತಿದ್ದಂತೆ ವಾಸನೆ ಬರತೊಡಗಿತು. ಮನೆಯ ಕೋಣೆಯೊಳಗೆ ಮಲಗಿದ ಸ್ಥಿತಿಯಲ್ಲಿದ್ದ ಸೈನಿಕ ಅದಾಗಲೇ ಮೃತಪಟ್ಟು ಐದು ದಿನಗಳಾಗಿತ್ತು. ಮನೆಯಲ್ಲಿ ಮಾಜಿ ಸೈನಿಕ ಸೇರಿದಂತೆ ಇಬ್ಬರು ಅವಿವಾಹಿತ ಅಕ್ಕಂದಿರು ಇದ್ದಾರೆ. ಇಬ್ಬರು ಅಕ್ಕಂದಿರು ಮಾನಸಿಕವಾಗಿ ಅಸ್ವಸ್ಥತೆಯಾಗಿದ್ದರು. ಹಾಗಾಗಿ ಸೈನಿಕ ಮೃತಪಟ್ಟ ವಿಚಾರದ ಬಗ್ಗೆ ಅಷ್ಟು ತಲೆಕೆಡಸಿಕೊಂಡಿಲ್ಲ.

ನೆರೆಮನೆಯವರು ಬಂದು ನೋಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಬಳಿಕ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ.ಪ್ರಸನ್ನ ಹಾಗೂ ಸಿಬ್ಬಂದಿ ಗಳು ಭೇಟಿ ನೀಡಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!