Sunday, May 19, 2024
Homeತಾಜಾ ಸುದ್ದಿಜೂನ್ 30 ರವರೆಗೆ ಲಾಕ್‌ಡೌನ್ ಇದ್ರೂ ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್ ..!

ಜೂನ್ 30 ರವರೆಗೆ ಲಾಕ್‌ಡೌನ್ ಇದ್ರೂ ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್ ..!

spot_img
- Advertisement -
- Advertisement -

ನವದೆಹಲಿ: ದೇಶಾದ್ಯಂತ ಜೂನ್ 30 ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕಂಟೇನ್ಮೆಂಟ್ ಜೋನ್ ಗಳಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ. ಉಳಿದಂತೆ ಅಗತ್ಯ ವಸ್ತು ಮತ್ತು ಸೇವೆಗಳಿಗೆ ವಿನಾಯಿತಿ ನೀಡಲಾಗುತ್ತದೆ. ಜೂನ್ 30 ರವರೆಗೂ ಲಾಕ್ ಡೌನ್ 5.0 ಜಾರಿಯಲ್ಲಿರುತ್ತದೆ. ಲಾಕ್ ಡೌನ್ ಇದ್ದರೂ, ಅನೇಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ.

ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಮಾತ್ರ ಇನ್ನು ಮುಂದೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಜೂನ್ 30 ರ ವರೆಗೆ ಲಾಕ್ ಡೌನ್ 5 ಮುಂದುವರೆಯಲಿದೆ. ಆರ್ಥಿಕ ಚಟುವಟಿಕೆಗೆ ಆದ್ಯತೆ ನೀಡಲಾಗಿದ್ದು, ಲಾಕ್ ಡೌನ್ ಮುಂದುವರೆದಿದ್ದರು ಕೂಡ ಅನೇಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ.

ಮೊದಲ ಹಂತದಲ್ಲಿ ದೇವಸ್ಥಾನಗಳು, ಪ್ರಾರ್ಥನಾ ಮಂದಿರಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಶಾಪಿಂಗ್ ಮಾಲ್‌ಗಳನ್ನು ಜೂನ್ 8ರಿಂದ ತೆರೆಯಲು ಈ ಆದೇಶದಲ್ಲಿ ಅವಕಾಶ ನೀಡಲಾಗಿದೆ.

ಎರಡನೇ ಹಂತದಲ್ಲಿ ಶಾಲೆ ಕಾಲೇಜುಗಳು, ಶೈಕ್ಷಣಿಕ ತರಬೇತಿ ಸಂಸ್ಥೆಗಳನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು.

ಮೂರನೇ ಹಂತದಲ್ಲಿ ಅಂತಾರಾಷ್ಟ್ರೀಯ ವಿಮಾನ ಯಾನ, ಮೆಟ್ರೋ ರೈಲು ಸೇವೆ, ಸಿನೆಮಾ ಹಾಲ್‌ಗಳು, ಜಿಮ್‌ಗಳು, ಸ್ವಿಮಿಂಗ್ ಪೂಲ್‌ಗಳು, ಮನರಂಜನಾ ಪಾರ್ಕ್‌ಗಳು, ಬಾರ್‌ಗಳು, ಆಡಿಟೋರಿಯಂಗಳು, ದೊಡ್ಡ ದೊಡ್ಡ ಸಮಾರಂಭದ ಸ್ಥಳ ಮುಂತಾದವುಗಳನ್ನು ತೆರೆಯುವ ಬಗ್ಗೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನಿಸಲಾಗುವುದು.

ಹೋಟೆಲ್, ರೆಸ್ಟೋರೆಂಟ್ ಆತಿಥ್ಯ ಸೇವೆಗಳಿಗೂ ಅವಕಾಶ ನೀಡಲಾಗಿದೆ. ಕಂಟೋನ್ಮೆಂಟ್ ಹೊರತುಪಡಿಸಿ ಉಳಿದೆಡೆ ಹಂತಹಂತವಾಗಿ ವಿನಾಯಿತಿ ನೀಡಲಾಗುವುದು. ಅಂತರರಾಜ್ಯ ಮತ್ತು ರಾಜ್ಯದೊಳಗಿನ ಪ್ರಯಾಣಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಅಂತರರಾಜ್ಯ ಪ್ರಯಾಣಕ್ಕೆ ಯಾವುದೇ ಅನುಮತಿ ಬೇಕಾಗಿಲ್ಲ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!