- Advertisement -
- Advertisement -
ಬೆಳಗಾವಿ ಉದ್ಯಮ ಭಾಗ್ ಠಾಣೆ ಪೊಲೀಸರು ತರಕಾರಿಯೊಂದಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 3.70 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಯ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ.
ಗೂಡ್ಸ್ ಟೆಂಪೋದಲ್ಲಿ ತರಕಾರಿಗಳ ನಡುವೆ ಮದ್ಯ ಸಾಗಿಸಲಾಗುತ್ತಿತ್ತು. ವಾಹನ ತಡೆದು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮದ್ಯ ಸಾಗಿಸುತ್ತಿರುವುದು ಕಂಡುಬಂದಿದ್ದು ಇಬ್ಬರನ್ನು ಬಂಧಿಸಲಾಗಿದೆ.
ಮಂಜುನಾಥ ಪಾಟೀಲ ಮತ್ತು ಸುಭಾಷ್ ಬಂಧಿತ ಆರೋಪಿಗಳು. ಮದ್ಯ ಸಾಗಿಸುತ್ತಿದ್ದ ವಾಹನ ಹಾಗೂ ವಿವಿಧ ಕಂಪನಿಗಳ ಮದ್ಯ ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.
- Advertisement -