ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಹಾಗಾಗಿ ಕಾಂಡೋಮ್ ಸೇರಿದಂತೆ ಅನೇಕ ವಸ್ತುಗಳು ಸಿಗ್ತಿಲ್ಲ. ಕಾಂಡೋಮ್ ಗೆ ಬೇಡಿಕೆ ಹೆಚ್ಚಾಗಿದೆ. ಕಾರ್ಖಾನೆಗಳು ಮುಚ್ಚಿರುವ ಕಾರಣ ಔಷಧಿ ಅಂಗಡಿಗಳಿಗೆ ಅದು ಸರಬರಾಜಾಗ್ತಿಲ್ಲ. ಕಾಂಡೋಮ್ ಇಲ್ಲದ ಸಮಯದಲ್ಲಿ ಕಾಮಾಸಕ್ತಿಯನ್ನು ನಿಯಂತ್ರಿಸಲು ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ.
ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ. ಪರಿಸ್ಥಿತಿ ಬಗ್ಗೆ ಇಬ್ಬರೂ ಒಟ್ಟಿಗೆ ಮಾರ್ಗ ಕಂಡುಕೊಳ್ಳಿ. ಲೈಂಗಿಕ ಶಕ್ತಿಯನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗಿಲ್ಲವೆಂದ್ರೆ ನಿಮ್ಮ ಸಂಗಾತಿಗೆ ತಿಳಿಸಿರಿ. ಅದನ್ನು ನಿಯಂತ್ರಿಸಲು ಅವರು ಸಹಾಯ ಮಾಡಬಹುದು.
ಆಲೋಚನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ಪ್ರತಿ ಬಾರಿ ಲೈಂಗಿಕತೆ ಬಗ್ಗೆ ಯೋಚಿಸಬೇಡಿ. ಆ ಆಲೋಚನೆ ಮನಸ್ಸಿಗೆ ಬಂದಾಗಲೆಲ್ಲ ಮನಸ್ಸನ್ನು ತಕ್ಷಣವೇ ಮತ್ತೊಂದು ಆಲೋಚನೆಗೆ ತಿರುಗಿಸಿ. ನಿಮಗಿಷ್ಟವಾದ ಬೇರೆ ಕೆಲಸ ಮಾಡಿ.
ವರ್ಕ್ ಫ್ರಂ ಹೋಮ್ ಮಾಡುತ್ತಿದ್ದರೆ ಅದರಲ್ಲಿ ಮಗ್ನರಾಗಿ. ಖಾಲಿ ಇದ್ದರೆ ಸುಮ್ಮನೆ ಕುಳಿತುಕೊಳ್ಳಬೇಡಿ. ಬೆಳಿಗ್ಗೆ ಎದ್ದ ತಕ್ಷಣ ವೇಳಾಪಟ್ಟಿಯನ್ನು ಸಿದ್ಧಪಡಿಸಿ. ನಿರಂತರ ಆ ಕೆಲಸದಲ್ಲಿ ನಿರತರಾಗಿ.
ಕಾಮಾಸಕ್ತಿಯನ್ನು ನಿಯಂತ್ರಿಸಲು ವ್ಯಾಯಾಮ ಬಹಳಷ್ಟು ಸಹಾಯ ಮಾಡುತ್ತದೆ. ಮನೆಯಲ್ಲಿ ಜಿಮ್ ಉಪಕರಣಗಳನ್ನು ಹೊಂದಿದ್ದರೆ ಅದನ್ನು ಅಭ್ಯಾಸ ಮಾಡಿ. ಯೋಗ, ಸಣ್ಣಪುಟ್ಟ ವ್ಯಾಯಾಮ, ಧ್ಯಾನ ಮನಸ್ಸನ್ನು ನಿಯಂತ್ರಿಸಲು ನೆರವಾಗುತ್ತದೆ.
ಸೆಕ್ಸ್ ಮಾತ್ರ ಪ್ರೀತಿ ವ್ಯಕ್ತಪಡಿಸುವ ವಿಧಾನವಲ್ಲ. ಬೇರೆ ವಿಧಾನಗಳ ಮೂಲಕ ಪ್ರೀತಿ ವ್ಯಕ್ತಪಡಿಸಿ. ಇಬ್ಬರ ಮಧ್ಯೆ ಸಂಬಂಧ ಗಟ್ಟಿಯಾಗಿರುವಂತೆ ನೋಡಿಕೊಳ್ಳಿ.
ಈ ಎಲ್ಲದರ ಮಧ್ಯೆ ಕಾಮಾಸಕ್ತಿ ನಿಯಂತ್ರಣಕ್ಕೆ ಬಂದಿಲ್ಲವೆಂದಾದ್ರೆ ವೈದ್ಯರನ್ನು ಸಂಪರ್ಕಿಸಿ. ಚಿಕಿತ್ಸಾಲಯಕ್ಕೆ ಹೋಗಲು ಸಾಧ್ಯವಿಲ್ಲ. ಆದ್ರೆ ವೈದ್ಯರು ಆನ್ಲೈನ್ ನಲ್ಲಿ, ಫೋನ್ ನಲ್ಲಿ ಸಿಗ್ತಾರೆ. ಅಲ್ಲಿ ಅವ್ರನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.