Thursday, June 4, 2026
Homeಕರಾವಳಿಉಡುಪಿಉಡುಪಿ; 2 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದ ಲೈನ್ ಮ್ಯಾನ್

ಉಡುಪಿ; 2 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದ ಲೈನ್ ಮ್ಯಾನ್

- Advertisement -
- Advertisement -

ಉಡುಪಿ; 2 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೈನ್ ಮ್ಯಾನ್ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಇಂದು ಬೈಂದೂರಿನಲ್ಲಿ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ಮೆಸ್ಕಾಂ ಲೈನ್ ಮ್ಯಾನ್ ರಮೇಶ್ ಬಡಿಗೇರ್(28) ನನ್ನು ಬಂಧಿಸಲಾಗಿದೆ.

ಬೈಂದೂರಿನ ನಿವಾಸಿಯೊಬ್ಬರು ತನ್ನ ಮನೆಯ ಸಮೀಪದ ಮರವನ್ನು ಕಡಿಯವುದಕ್ಕಾಗಿ ಅಲ್ಲೇ ಹಾದು ಹೋಗಿರುವ ವಿದ್ಯುತ್ ಕಂಬದ ಲೈನ್ನ ಸಂಪರ್ಕ ಕಡಿತ ಗೊಳಿಸಲು ಲೈನ್ ಮ್ಯಾನ್ ಗೆ ತಿಳಿಸಿದ್ದರು. ಅದಕ್ಕೆ ಆತ 2000ರೂ. ಲಂಚದ ಬೇಡಿಕೆ ಇಟ್ಟಿದ್ದನು ಎನ್ನಲಾಗಿದೆ.

ಲಂಚ ನೀಡಲು ಒಪ್ಪದ ಮನೆಯವರು ಈ ಬಗ್ಗೆ ಉಡುಪಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಮನೆಯವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೈನ್ ಮೆನ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!