Wednesday, May 8, 2024
Homeಕರಾವಳಿತುಳು ಲೇಖಕಿಗೆ ಸೋಷಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ! ಕೃತಿಚೌರ್ಯ ಪ್ರಶ್ನಿಸಿದ್ದೇ ತಪ್ಪಾಯ್ತೆ?

ತುಳು ಲೇಖಕಿಗೆ ಸೋಷಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ! ಕೃತಿಚೌರ್ಯ ಪ್ರಶ್ನಿಸಿದ್ದೇ ತಪ್ಪಾಯ್ತೆ?

spot_img
- Advertisement -
- Advertisement -

ಬೆಂಗಳೂರು : ತುಳು ಲೇಖಕಿ ಲಕ್ಷ್ಮೀ ಜಿ ಪ್ರಸಾದ್ ಗೆ ಸೋಷಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು ಈ ಕುರಿತು ಆರೋಪಿಸಿ, ಅವರು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ 11 ಮಂದಿ ವಿರುದ್ಧ ದೂರು ನೀಡಿದ್ದಾರೆ.

ಲಕ್ಷ್ಮೀ ಜಿ ಪ್ರಸಾದ್ ಅವರು ತಮ್ಮ ಬ್ಲಾಗ್ ನಲ್ಲಿ ತಮ್ಮದೇ ಕೃತಿಯೊಂದರ ಪ್ರತಿಯನ್ನು ಪ್ರಕಟಿಸಿದ್ದರು. ಅಂತಹ ಕೃತಿಯನ್ನು ಅವರ ಒಪ್ಪಿಗೆಯೂ ಇಲ್ಲದೇ ವಿಕಿ ಪೀಡಿಯಾದಲ್ಲಿ ಪ್ರಕಟಿಸಲಾಗಿದೆ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದರು. ಇದೇ ವಿಚಾರ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಕೂಡ ಆಗಿದ್ದು, ಕೃತಿ ಚೌರ್ಯ ಪ್ರಶ್ನಿಸಿದ್ದರಿಂದಾಗಿ ತುಳು ಲೇಖಕಿ ಡಾ.ಲಕ್ಷ್ಮೀ ಜಿ ಪ್ರಸಾದ್ ಅವರಿಗೆ ಸೋಷಿಯಲ್ ಮೀಡಿಯಾದ ಮೂಲಕ ಜೀವ ಬೆದರಿಕೆ ಒಡ್ಡಲಾಗಿದೆ ಎಂದಿದ್ದಾರೆ.

ಪ್ರಕರಣದಲ್ಲಿ ಪವನಜ ಯು.ಬಿ, ವಿಶ್ವನಾಥ ಬದಿಕಾನ, ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ, ಅಕ್ಷತಾ ರಾಜ್ ಪೆರ್ಲ, ಅರ್ಚನಾ ಪ್ರಕಾಶ್ ಭಟ್, ಜಯಾನಂದ ಕೆ ಬಂಗೇರ, ಭರತೇಶ್ ಅಲಸಂಡೆ ಮಜಲು, ಅನೂಪ್ ನರ್ಯೂರು, ಸೂರ್ಯ ಹೆಬ್ಬಾರ್, ಪ್ರಕಾಶ್ ಮಾರ್ಪಾಡಿ ಹಾಗೂ ವಿಕಾಸ್ ಹೆಗಡೆ ಸೇರಿದಂತೆ 11 ಜನರ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ರಕ್ಷಣೆ ಕೋರಿ ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!