ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿರಂತರ ಭೂಕಂಪ ಹಿನ್ನೆಲೆಯಲ್ಲಿ
ಭೂಕಂಪನ ಅಧ್ಯಯನಕ್ಕೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಜಿಯಾಗ್ರಾಫಿಕಲ್ ಸಂಸ್ಥೆಗೆ ಪತ್ರ ಬರೆದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಡಿಕೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಭೂಕಂಪನದ ವಿಸ್ತೃತ ಅಧ್ಯಯನಕ್ಕೆ ಮನವಿ ಮಾಡಿದ್ದೇನೆ, ವಿಜ್ಞಾನಿಗಳ ಅಧ್ಯಯನ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಭೂ ಕುಸಿತ ತಡೆಯಲು ಹಲವು ತಂತ್ರಜ್ಞಾನ ಬಳಕೆಗೆ ಚಿಂತನೆ ಮಾಡಲಾಗಿದ್ದು, ಈ ಕುರಿತು ಅಮೃತ್ ಯೂನಿವರ್ಸಿಟಿ ಸಲಹೆ ನೀಡಲಿದೆ ಎಂದು ಸಿಎಂ ಹೇಳಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಟಾಸ್ಕ್ ಪೋರ್ಸ್ ಮಾಡಲಾಗಿದ್ದು, ವಿದ್ಯುತ್ ನಿರ್ವಹಣೆಗೆ ವಿಶೇಷ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಅಲ್ಲದೇ ಡಿಸಿಗೆ ಅಗತ್ಯವಿದ್ದರೆ ಹೆಚ್ಚಿನ ಹಣ ಪೂರೈಕೆ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಇದೇ ವೇಳೆ ಕಾಳಜಿ ಕೇಂದ್ರದಲ್ಲಿರುವವರಿಗೆ ಅಗತ್ಯ ಸೌಲಭ್ಯ ಕೊಡಿ, ನೆಂಟರಿಸ್ಟರ ಮನೆಯಲ್ಲಿರುವವರೆಗೂ ಎಲ್ಲಾ ರೇಷನ್ ಕೊಡಿ ಮತ್ತು ಕಾಳಜಿ ಕೇಂದ್ರದಿಂದ ಮನೆಗೆ ಮರಳುವಾಗಲೂ ದಿನಸಿ ಕೊಡಿ ಎಂದು ಕೊಡಗು ಜಿಲ್ಲಾಡಳಿತಕ್ಕೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ.