Monday, May 6, 2024
Homeತಾಜಾ ಸುದ್ದಿಕರಾವಳಿಯಲ್ಲಿ ಆರಂಭದಲ್ಲಿಯೇ ಕ್ಷೀಣಿಸಿದ್ದ ಮುಂಗಾರು: ಮಂಗಳೂರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ

ಕರಾವಳಿಯಲ್ಲಿ ಆರಂಭದಲ್ಲಿಯೇ ಕ್ಷೀಣಿಸಿದ್ದ ಮುಂಗಾರು: ಮಂಗಳೂರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ

spot_img
- Advertisement -
- Advertisement -

ಮಂಗಳೂರು: ರಾಜ್ಯ ಕರಾವಳಿ ಭಾಗದಲ್ಲಿ ಆರಂಭದಲ್ಲೇ ಮುಂಗಾರು ಕ್ಷೀಣಿಸಿದ್ದ ಪರಿಣಾಮ ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನಲ್ಲಿ ವಾಡಿಕೆಗಿಂತ ಅತೀ ಕಡಿಮೆ ಮಳೆ ಸುರಿದಿದೆ.

ಮೇ ಅಂತ್ಯದಲ್ಲಿ ಕೇರಳ ಕರಾವಳಿಗೆ ಕಾಲಿಟ್ಟ ಮುಂಗಾರು ಜೂನ್ 1ರಂದು ರಾಜ್ಯ ಕರಾವಳಿಗೆ ತಲುಪಿತ್ತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಒಂದು ದಿನ ಬಿರುಸಿನ ಮಳೆಯಾದ ಬಳಿಕ ಮತ್ತೆ ಮಳೆ ತಗ್ಗಿತ್ತು. ಇದೀಗ ಕಳೆದ ಒಂದು ವಾರಗಳ ಹಿಂದೆಯಷ್ಟೇ ಮಳೆ ಬಿರುಸು ಪಡೆದಿದೆ. ಆದರೆ, ತಿಂಗಳ ಲೆಕ್ಕಾಚಾರದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹೆಚ್ಚಿನ ಮಳೆ ಕೊರತೆ ಇದೆ.

ಜೂನ್ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ 732.4 ಮಿ.ಮೀ. ವಾಡಿಕೆ ಮಳೆಯಲ್ಲಿ 407.4 ಮಿ.ಮೀ. ಮಳೆಯಾಗಿದೆ. ಬಂಟ್ವಾಳ ತಾಲೂಕಿನಲ್ಲಿ 768.4 ಮಿ.ಮೀ. ವಾಡಿಕೆ ಮಳೆಯಲ್ಲಿ 338.2 ಮಿ.ಮೀ., ಮಂಗಳೂರಿನಲ್ಲಿ 837.7 ಮಿ.ಮೀ.ನಲ್ಲಿ 362.3 ಮಿ.ಮೀ., ಪುತ್ತೂರು ತಾಲೂಕಿನಲ್ಲಿ 761.2 ಮಿ.ಮೀ.ನಲ್ಲಿ 324.9 ಮಿ.ಮೀ., ಸುಳ್ಯ ತಾಲೂಕಿನಲ್ಲಿ 610.6 ಮಿ.ಮೀ.ನಲ್ಲಿ 283.4 ಮಿ.ಮೀ., ಮೂಡುಬಿದಿರೆಯಲ್ಲಿ 810 ಮಿ.ಮೀ.ನಲ್ಲಿ 361 ಮಿ.ಮೀ. ಮತ್ತು ಕಡಬ ತಾ|ನಲ್ಲಿ 675 ಮಿ.ಮೀ. ವಾಡಿಕೆ ಮಳೆಯಲ್ಲಿ 445 ಮಿ.ಮೀ. ಮಳೆಯಾಗಿದೆ. ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿದರೆ ಮುಂದೆ ಅಪ್ಪಳಿಸುವ ಮುಂಗಾರು ಮಾರುತದ ಪ್ರಭಾವ ಕಡಿಮೆ ಇರುವ ಸಾಧ್ಯತೆ ಇರುತ್ತದೆ.

ಅಲ್ಲದೆ, ಮೇ ತಿಂಗಳಲ್ಲಿ “ಅಸಾನಿ’ ಎಂಬ ಚಂಡಮಾರುತ ಉದ್ಭವಿಸಿದ್ದು, ಈ ಚಂಡಮಾರುತ ಕ್ಷೀಣಿ ಸಿದ ಬಳಿಕ ಮುಂಬರುವ ಮುಂಗಾರು ಮಳೆಯಲ್ಲೂ ಪ್ರಭಾವ ಬೀರಿತ್ತು. ಕಳೆದ ವರ್ಷವೂ ಒಟ್ಟಾರೆ ಮುಂಗಾರು ವೇಳೆ ಶೇ.13ರಷ್ಟು ಮಳೆ ಕೊರತೆ ಉಂಟಾಗಿತ್ತು. ಆದರೆ ಐಎಂಡಿ ಹೇಳಿಕೆಯ ಪ್ರಕಾರ ಒಟ್ಟಾರೆ ಮುಂಗಾರು ಅವಧಿಯಲ್ಲಿ ವಾಡಿಕೆ ಮಳೆ ಸುರಿಯುತ್ತದೆ ಎಂದು ಅಂದಾಜಿಸಲಾಗಿದೆ.

- Advertisement -
spot_img

Latest News

error: Content is protected !!