Tuesday, June 23, 2026
Homeಚಿಕ್ಕಮಗಳೂರುಚಿಕ್ಕಮಗಳೂರು; ಮನೆಯ ಹಿಂದೆ ಕೊಟ್ಟಿಗೆಯಲ್ಲಿ ಆಟವಾಡುತ್ತಿದ್ದ 5 ವರ್ಷದ ಮಗುವನ್ನು ಹೊತ್ತೊಯ್ದ ಚಿರತೆ

ಚಿಕ್ಕಮಗಳೂರು; ಮನೆಯ ಹಿಂದೆ ಕೊಟ್ಟಿಗೆಯಲ್ಲಿ ಆಟವಾಡುತ್ತಿದ್ದ 5 ವರ್ಷದ ಮಗುವನ್ನು ಹೊತ್ತೊಯ್ದ ಚಿರತೆ

- Advertisement -
- Advertisement -

ಚಿಕ್ಕಮಗಳೂರು; ಮನೆಯ ಹಿಂದೆ ಕೊಟ್ಟಿಗೆಯಲ್ಲಿ ಆಟವಾಡುತ್ತಿದ್ದ 5 ವರ್ಷದ ಮಗುವನ್ನು ಚಿರತೆ ಹೊತ್ತೊಯ್ದ ಘಟನೆ ತರೀಕೆರೆ ತಾಲೂಕಿನ ಮುಂಡ್ರೆ ಸಮೀಪದ ನವಿಲೇಕಲ್ ಗುಡ್ಡ ಗ್ರಾಮದಲ್ಲಿ ಗುರುವಾರ(ನ.20) ಸಂಜೆ ನಡೆದಿದೆ. 5 ವರ್ಷದ ಸಾನ್ವಿ ಮೃತ ಮಗು.

ಮನೆಯ ಹಿಂದಿನ ಕೊಟ್ಟಿಗೆಯ ಬಳಿ ಮಗು ಇದ್ದಾಗ ಚಿರತೆ ಏಕಾಏಕಿ ದಾಳಿ ನಡೆಸಿದೆ . ಮಗು ಕೂಗುತ್ತಿದ್ದಂತೆ ಓಡಿ ಬಂದ ಮನೆಯವರನ್ನು ಕಂಡ ಚಿರತೆ, ಮಗುವನ್ನು ಕಾಡಿನತ್ತ ಎಳೆದುಕೊಂಡು ಹೋಗಿದೆ . ಸ್ಥಳೀಯರು ಹುಡುಕಾಡಿದಾಗ ಕಾಡಂಚಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ .ಈ ಕುರಿತು ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!