Saturday, April 27, 2024
Homeಉದ್ಯಮನಿಂಬೆಹಣ್ಣಿನ ಬೆಲೆಯಲ್ಲಿ ಭಾರೀ ಏರಿಕೆ: ಮಾರುಕಟ್ಟೆಯ ದರ ದಿಢೀರ್ ಹೆಚ್ಚಳ

ನಿಂಬೆಹಣ್ಣಿನ ಬೆಲೆಯಲ್ಲಿ ಭಾರೀ ಏರಿಕೆ: ಮಾರುಕಟ್ಟೆಯ ದರ ದಿಢೀರ್ ಹೆಚ್ಚಳ

spot_img
- Advertisement -
- Advertisement -

ದೆಹಲಿ: ದೇಶದಲ್ಲಿ ಬೆಲೆ ಏರಿಕೆಗೆ ಕಡಿವಾಣ ಇಲ್ಲದಂತೆ ಏರಿಕೆಯಾಗುತ್ತಲೇ ಇದೆ. ಈ ನಡುವೆ ದಿನಸಿ ವಸ್ತುಗಳ ಬೆಲೆಯೂ ಸಹ ಗಗನಕ್ಕೇರುತ್ತಿದೆ, ಈ ಸಾಲಿಗೀಗ ನಿಂಬೆ ಹಣ್ಣು ಸೇರಿಕೊಂಡಿದೆ. ಹೌದು ಇದ್ದಕ್ಕಿದ್ದಂತೆ ನಿಂಬೆ ಹಣ್ಣಿನ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಗ್ರಾಹಕರು ಶಾಕ್ ಗೆ ಒಳಗಾಗಿದ್ದಾರೆ.


ದೆಹಲಿ ಮಾರುಕಟ್ಟೆಯಲ್ಲಿ 1 ಕೆ.ಜಿ ನಿಂಬೆ ಹಣ್ಣಿನ ಬೆಲೆ ಬರೋಬ್ಬರಿ 300 ರೂಪಾಯಿಗೆ ಏರಿಕೆಯಾಗಿದ್ದು, ಮಾರುಕಟ್ಟೆ ತೆರಳಿದ ಗ್ರಾಹಕನಿಗೆ ಶಾಕ್ ಆಗಿದೆ. ದೆಹಲಿ ಸೇರಿದಂತೆ ಹಲವು ರಾಜ್ಯಗಳು ಹೀಟ್‌ವೇವ್ ನಿಂದ ತತ್ತರಿಸಿವೆ. ಬಿಸಿ ಗಾಳಿಯ ಕಾರಣದಿಂದಾಗಿ ನಿಂಬೆ ಹಣ್ಣಿಗೆ ಚಿನ್ನದ ಬೆಲೆ ಬಂದಿದೆ ಎನ್ನಲಾಗ್ತಿದೆ.

- Advertisement -
spot_img

Latest News

error: Content is protected !!