Wednesday, May 8, 2024
Homeತಾಜಾ ಸುದ್ದಿಹೊರರಾಜ್ಯದ ಉದ್ಯೋಗಿಗಳು ಕಡ್ಡಾಯವಾಗಿ ಕನ್ನಡ ಕಲಿಯಬೇಕು: ಕನ್ನಡ ಕಲಿಯದೇ ಇದ್ದರೆ ಕ್ರಮ ಕೈಗೊಳ್ಳಬೇಕು: ಟಿ.ಎಸ್.ನಾಗಾಭರಣ

ಹೊರರಾಜ್ಯದ ಉದ್ಯೋಗಿಗಳು ಕಡ್ಡಾಯವಾಗಿ ಕನ್ನಡ ಕಲಿಯಬೇಕು: ಕನ್ನಡ ಕಲಿಯದೇ ಇದ್ದರೆ ಕ್ರಮ ಕೈಗೊಳ್ಳಬೇಕು: ಟಿ.ಎಸ್.ನಾಗಾಭರಣ

spot_img
- Advertisement -
- Advertisement -

ಮಂಗಳೂರು: ಹೊರರಾಜ್ಯಗಳಿಂದ ರಾಜ್ಯಕ್ಕೆ ಬರುವ ಉದ್ಯೋಗಿಗಳು ಕಡ್ಡಾಯವಾಗಿ ಕನ್ನಡ ಕಲಿಯಲೇ ಬೇಕು. ಈ ಹಿನ್ನೆಲೆಯಲ್ಲಿ ಅವರಿಗೆ ತರಬೇತಿಗೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಮಾಡಬೇಕು. ಇದರ ಹೊರತಾಗಿಯೂ ಅವರು ಕನ್ನಡ ಕಲಿಯದೇ, ಕನ್ನಡ ಬಳಸದೇ ಹೋದಲ್ಲಿ ಅಂತಹ ಉದ್ಯೋಗಿಗಳ ವಿರುದ್ಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಹೇಳಿದ್ದಾರೆ.

ನಗರದ ಬ್ಯಾಂಕ್ ಆಫ್ ಬರೋಡಾದ ಸಭಾಂಗಣದಲ್ಲಿ ನಡೆದ ಕನ್ನಡ ಅನುಷ್ಠಾನದ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್​ಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಅರ್ಜಿ, ಚಲನ್, ನಾಮ ಫಲಕಗಳು, ಜಾಹೀರಾತುಗಳು, ನಮೂನೆ, ಚೆಕ್, ರಸೀದಿ ಸೇರಿದಂತೆ ಇತ್ಯಾದಿಗಳು ಕನ್ನಡದಲ್ಲೇ ಮುದ್ರಿತಗೊಂಡು ಗ್ರಾಹಕರ ಕೈಸೇರಬೇಕು. ಹಿಂದಿ-ಇಂಗ್ಲಿಷ್ ಭಾಷೆಗೆ ನೀಡುವ ಸ್ಥಾನಮಾನ ಕನ್ನಡ ಭಾಷೆಗೂ ದೊರಕಬೇಕು ಎಂದು ಸೂಚಿಸಿದರು.

ರೈತರಿಗೆ ಮತ್ತು ಗ್ರಾಮೀಣ ಜನತೆಗೆ ಸುಲಭವಾಗಿ ಅರ್ಥವಾಗಲು ಬ್ಯಾಂಕ್​ನ ಅಧಿಕೃತ ವೆಬ್‍ಸೈಟ್ ಹಾಗೂ ಮೊಬೈಲ್ ಬ್ಯಾಂಕಿಂಗ್​ನಲ್ಲಿ ಕನ್ನಡ ಭಾಷೆಯನ್ನು ಅನುಷ್ಠಾನಕ್ಕೆ ತರಬೇಕು. ಬ್ಯಾಂಕ್​ಗಳಲ್ಲಿರುವ ಕನ್ನಡ ಘಟಕಗಳಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿರುವ ಎಲ್ಲಾ ಆಚರಣೆಗಳನ್ನು ಮಾಡಬೇಕು. ಬ್ಯಾಂಕ್​ಗಳ ಮಾಸಪತ್ರಿಕೆಗಳಲ್ಲಿಯೂ ಕನ್ನಡ ಭಾಷೆಯ ಲೇಖನಗಳಿರಬೇಕು. ಕರ್ನಾಟಕದಲ್ಲಿ ವ್ಯವಹರಿಸುವ ಭಾಷೆಗಳೇ ಕನ್ನಡವನ್ನು ಬಳಸದೆ ಇತರೆ ಭಾಷೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೆ ಮುಂದೆ ಕನ್ನಡವನ್ನು ಹುಡುಕುವ ಪರಿಸ್ಥಿತಿ ಎದುರಾಗಬಹುದು ಎಂದು ಟಿ.ಎಸ್.ನಾಗಾಭರಣ ಕಳವಳ ವ್ಯಕ್ತಪಡಿಸಿದರು.

- Advertisement -
spot_img

Latest News

error: Content is protected !!