Thursday, June 25, 2026
Homeಕರಾವಳಿಕರ್ಕಶ ಹಾರ್ನ್ ಅಳವಡಿಸಿರುವ ವಾಹನ ಸವಾರರಿಗೆ ಶಾಕ್ ಕೊಟ್ಟ ಮಂಗಳೂರು ಪೊಲೀಸರು

ಕರ್ಕಶ ಹಾರ್ನ್ ಅಳವಡಿಸಿರುವ ವಾಹನ ಸವಾರರಿಗೆ ಶಾಕ್ ಕೊಟ್ಟ ಮಂಗಳೂರು ಪೊಲೀಸರು

- Advertisement -
- Advertisement -

ಮಂಗಳೂರು : ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಕರ್ಕಶ ಹಾರ್ನ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ ವಾಹನ ಸವಾರರಿಗೆ ಮಂಗಳೂರು ಸಂಚಾರಿ ಪೊಲೀಸರು ಭರ್ಜರಿ ಶಾಕ್ ಕೊಟ್ಟಿದ್ದಾರೆ. ಈ ಸಂಬಂಧ 154 ಪ್ರಕರಣಗಳನ್ನು ದಾಖಲಿಸಿ ಕರ್ಕಶ ಹಾರ್ನ್‌ಗಳನ್ನು ತೆರವುಗೊಳಿಸಿದ್ದಾರೆ. ಅಲ್ಲದೇ 77 ಸಾವಿರ ರೂ. ದಂಡ ವಿಧಿಸಿದ್ದಾರೆ.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್‌ರ ಸೂಚನೆಯ ಮೇರೆಗೆ ಸಂಚಾರ ಉತ್ತರ, ಸಂಚಾರ ದಕ್ಷಿಣ, ಸಂಚಾರ ಪೂರ್ವ ಠಾಣೆಗಳ ವ್ಯಾಪ್ತಿಗಳಲ್ಲಿ ಕರ್ಕಶ ಹಾರ್ನ್ ತೆರವು ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರಣೆಯು ನಿರಂತರ ಮುಂದುವರಿಯಲಿದೆ ಎಂದು ಸಂಚಾರ ಉಪವಿಭಾಗದ ಎಸಿಪಿ ನಟರಾಜ್ ತಿಳಿಸಿದ್ದಾರೆ.

- Advertisement -

Latest News

error: Content is protected !!