Saturday, June 6, 2026
Homeಕರಾವಳಿಬೆಳ್ತಂಗಡಿ: ಯುವ ವಕೀಲರ ವೇದಿಕೆ ವತಿಯಿಂದ ಕಾನೂನು ಮಾಹಿತಿ ಶಿಬಿರ

ಬೆಳ್ತಂಗಡಿ: ಯುವ ವಕೀಲರ ವೇದಿಕೆ ವತಿಯಿಂದ ಕಾನೂನು ಮಾಹಿತಿ ಶಿಬಿರ

- Advertisement -
- Advertisement -

ಬೆಳ್ತಂಗಡಿ: ವಕೀಲರ ಭವನದ ಸಭಾಂಗಣ ದಲ್ಲಿ ಯುವ ವಕೀಲರ ವೇದಿಕೆ ವತಿಯಿಂದ ಕಾನೂನು ಮಾಹಿತಿ ಶಿಬಿರವನ್ನು ವಕೀಲರಿಗೆ ಹಮ್ಮಿಕೊಳ್ಳಲಾಗಿತ್ತು.

ಹಿರಿಯ ವಕೀಲರಾದ ಶ್ರೀ ಸುಬ್ರಮಣ್ಯ ಕುಮಾರ್ ಅಗರ್ತ ರವರು ನ್ಯಾಯಾಲಯದಲ್ಲಿ ವಕೀಲರ ನಡವಳಿಕೆಗಳು, ಸಿವಿಲ್ ರೂಲ್ಸ್ ಆಫ್ ಪ್ರಾಕ್ಟೀಸ್ ಕುರಿತು ಕಾನೂನು ಬಗ್ಗೆ ಮಾಹಿತಿಯನ್ನು ನೀಡಿದರು.

ಶಿಬಿರದ ಅಧ್ಯಕ್ಷ ಸ್ಥಾನವನ್ನು ಯುವ ವಕೀಲರ ವೇದಿಕೆ ಯ ಅಧ್ಯಕ್ಷರಾದ ಶ್ರೀ. ಪ್ರಶಾಂತ್ ಎಂ ವಹಿಸಿದ್ದರು.

ವೇದಿಕೆಯಲ್ಲಿ ವಕೀಲರ ಸಂಘ ರಿ. ಬೆಳ್ತಂಗಡಿ ಇದರ ಅಧ್ಯಕ್ಷರಾದ ಶ್ರೀ. ಪ್ರಸಾದ್ ಕೆ. ಎಸ್, ಕಾರ್ಯದರ್ಶಿಯಾದ ಶ್ರೀ. ಶೈಲೇಶ್ ಆರ್ ಟೋಸರ್ ಉಪಸ್ಥಿತರಿದ್ದರು.

ಯುವ ವಕೀಲರ ವೇದಿಕೆಯ ಕಾರ್ಯದರ್ಶಿಯಾದ ಶ್ರೀ ನವೀನ್ ಬಿ. ಕೆ ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿ ಎಲ್ಲರನ್ನು ಸ್ವಾಗತಿಸಿದರು. ಶ್ರೀ ನವಾಜ್ ಷರೀಫ್ ಶಿಬಿರದಲ್ಲಿ ಪಾಲ್ಗೊಂಡು ವಂದಿಸಿದರು.

- Advertisement -

Latest News

error: Content is protected !!