Thursday, June 4, 2026
Homeಕರಾವಳಿಬಳಂಜ: ಡಾಕ್ಟರೇಟ್ ಪದವಿ ಪಡೆದ ಉಪನ್ಯಾಸಕ ಗಣೇಶ್ ಕೃಷ್ಣಭಟ್

ಬಳಂಜ: ಡಾಕ್ಟರೇಟ್ ಪದವಿ ಪಡೆದ ಉಪನ್ಯಾಸಕ ಗಣೇಶ್ ಕೃಷ್ಣಭಟ್

- Advertisement -
- Advertisement -

ಬಳಂಜ: ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಉಪನ್ಯಾಸಕ, ಬಳಂಜ ಗ್ರಾಮದ ಕೋಡಿ ನಿವಾಸಿ ಗಣೇಶ್ ಕೃಷ್ಣಭಟ್ಟ ರವರಿಗೆ ಮಂಡಿಸಿದ ‘ವಸ್ತುವಿದ್ಯಾ-ಮನುಷ್ಯ ಲಯಚಂದ್ರಿಕಾ ಗ್ರಂಥಯೋ ತುಲನಾತ್ಮಕ ಮಧ್ಯಯನಮ್’ ಎಂಬ ಪ್ರಬಂಧಕ್ಕೆ ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ತಮ್ಮ ಅಧ್ಯಯನವನ್ನು ವಿಶ್ವವಿದ್ಯಾಲಯದ ಶಾಖೆಯಾದ ಶೃಂಗೇರಿಯ ರಾಜೀವಗಾಂಧಿ ಸಂಸ್ಕೃತ ಕಾಲೇಜಿನಲ್ಲಿ ಪೂರೈಸಿರುವ ಕೃಷ್ಣಭಟ್ ಅವರು ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬಳಂಜ ಗ್ರಾಮದ ಕೋಡಿಂಗ ನಿವಾಸಿ ಗೋಪಾಲಕೃಷ್ಣ ಭಟ್ ಮತ್ತು ಉಷಾ ದಂಪತಿ ಪುತ್ರ.

- Advertisement -

Latest News

error: Content is protected !!