Thursday, June 4, 2026
Homeಕರಾವಳಿಬಂಟ್ವಾಳ; ತೋಟದಲ್ಲಿದ್ದ ದನವನ್ನು ತಿಂದು ಹಾಕಿದ ಚಿರತೆ

ಬಂಟ್ವಾಳ; ತೋಟದಲ್ಲಿದ್ದ ದನವನ್ನು ತಿಂದು ಹಾಕಿದ ಚಿರತೆ

- Advertisement -
- Advertisement -

 ಬಂಟ್ವಾಳ; ತೋಟದಲ್ಲಿದ್ದ ದನವೊಂದನ್ನು ರಾತ್ರಿ ವೇಳೆ ದಾಳಿ ನಡೆಸಿ ಚಿರತೆ ಕೊಂದು ಹಾಕಿದ ಘಟನೆ ಬಂಟ್ವಾಳದ ಪಂಜಿಕಲ್ಲು ಗ್ರಾಮದ ಕೇಲ್ದೋಡಿ ಎಂಬಲ್ಲಿ ನಡೆದಿದೆ.

ತೋಟಕ್ಕೆ ಎರಡು ದನಗಳನ್ನು ಮೇಯಲು ಬಿಟ್ಟಿದ್ದು, ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಅದು ತೋಟದಲ್ಲಿಯೇ ಮಲಗಿದ್ದು, ಮತ್ತೊಂದು ದನ ಮನೆಯಲ್ಲಿತ್ತು. ಬೆಳಗ್ಗೆ ಎದ್ದು ನೋಡುವಾಗ ತೋಟದಲ್ಲಿ ಮಲಗಿದ್ದ ದನ ನಾಪತ್ತೆಯಾಗಿತ್ತು. ಹಾಗಾಗಿ ಮನೆಯವರು ಹುಡುಕಿದಾಗ ತೋಟದ ಒಂದು ಮೂಲೆಯಲ್ಲಿ ಅರ್ಧ ದನದ ಕಳೇಬರ ಪತ್ತೆಯಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು,ಸ್ಥಳೀಯ ಪಶು ವೈದ್ಯಾಧಿಕಾರಿ ಅವಿನಾಶ್ ಭಟ್ ಹಾಗೂ ಸ್ಥಳೀಯ ಗ್ರಾ.ಪಂ ನವರು ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!