Saturday, June 6, 2026
Homeತಾಜಾ ಸುದ್ದಿಬಿಗ್ ಬಾಸ್ ಮನೆಯಿಂದ ಹೊರ ಬಂದು ಅಭಿಮಾನಿಗಳಿಗೆ ಆಡಿಯೋ ಸಂದೇಶ ನೀಡಿದ ಲಾಯರ್ ಜಗದೀಶ್

ಬಿಗ್ ಬಾಸ್ ಮನೆಯಿಂದ ಹೊರ ಬಂದು ಅಭಿಮಾನಿಗಳಿಗೆ ಆಡಿಯೋ ಸಂದೇಶ ನೀಡಿದ ಲಾಯರ್ ಜಗದೀಶ್

- Advertisement -
- Advertisement -

ಬೆಂಗಳೂರು; ಬಿಗ್ ಬಾಸ್ ಸೀಸನ್ 11 ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

ಈ ಕುರಿತು ಆಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಲಾಯರ್ ಜಗದೀಶ್, , ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಪ್ರತಿ ಒಂದು ಚಪ್ಪಾಳೆ, ಮೆಸೇಜ್, ನಿಮ್ಮ ಆಶೀರ್ವಾದ ನನ್ನ ಈ ಬಿಗ್ ಬಾಸ್ ಪಯಣ ಸಕ್ಸಸ್‌, ಅದು ನೀವು ಇಟ್ಟ ಈ ನಂಬಿಕೆ. ಅಭಿಮಾನಿಗಳಿಗೆ, ಕನ್ನಡದ ಜನತೆಗೆ ಮತ್ತೊಮ್ಮೆ ಕೋಟಿ ಕೋಟಿ ನಮನಗಳನ್ನು ಎಂದಿದ್ದಾರೆ.

ಸಾರ್ಥಕ ಆಯಿತು, ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ನನ್ನ ಬಳಿ ಪದಗಳು ಕಡಿಮೆ, ವಿಶ್ಲೇಷಣೆ ಮಾಡಲು. ನೂರಾರು ಕ್ಯಾಮೆರಾ, ಸಾವಿರಾರು ಬಿಗ್ ಬಾಸ್ ವರ್ಕ್ ಫೋರ್ಸ್, ಆ ಡೈರೆಕ್ಟರ್,, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಡೆಡಿಕೇಷನ್ ಹಾಗೂ ನನ್ನ 20 ಕೋಟಿಗೂ ಹೆಚ್ಚಿನ ಬಿಗ್ ಬಾಸ್ ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್‌ ಜಗದೀಶ್‌ನಿಂದ ನಿಮಗೆ ಕೋಟಿ ಕೋಟಿ ನಮನ ಎಂದು ಹೇಳಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.

- Advertisement -

Latest News

error: Content is protected !!