Sunday, August 30, 2026
Homeತಾಜಾ ಸುದ್ದಿಭಾರತದ ನ್ಯಾಯಾಲಯಗಳಲ್ಲಿ ನ್ಯಾಯದೇವತೆಯ ಕಣ್ಣಿಗೆ ಏಕೆ ಪಟ್ಟಿ ಕಟ್ಟುತ್ತಾರೆ; ಸುಪ್ರೀಂ ಕೋರ್ಟ್ ಬಿಚ್ಚಿಟ್ಟ ಕಾರಣ ಹೀಗಿದೆ ನೋಡಿ

ಭಾರತದ ನ್ಯಾಯಾಲಯಗಳಲ್ಲಿ ನ್ಯಾಯದೇವತೆಯ ಕಣ್ಣಿಗೆ ಏಕೆ ಪಟ್ಟಿ ಕಟ್ಟುತ್ತಾರೆ; ಸುಪ್ರೀಂ ಕೋರ್ಟ್ ಬಿಚ್ಚಿಟ್ಟ ಕಾರಣ ಹೀಗಿದೆ ನೋಡಿ

- Advertisement -
- Advertisement -

ಸುಪ್ರೀಂ ಕೋರ್ಟ್ ನ್ಯಾಯಾಲಯಕ್ಕೆ ಸಂಬಂಧಿಸಿಂತೆ ವಿಶೇಷವಾದ ಆದೇಶವನ್ನು ಹೊರಡಿಸಿದ್ದು, ಭಾರತದ ನ್ಯಾಯಾಲಯಗಳಲ್ಲಿರುವ ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ತೆರವುಗೊಳಿಸುವಂತೆ ಆದೇಶಿಸಿದೆ.   

ಈ ಆದೇಶವನ್ನು ಸುಪ್ರೀಂ ಕೋರ್ಟ್​ ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಹೊರಡಿಸಿದ್ದಾರೆ. 

ಯಾರನ್ನೂ ಎಂದಿಗೂ ಬೇಧ ಭಾವ ಮಾಡಬಾರದು ಎನ್ನುವ ಸಂಕೇತವಾಗಿ ಇದುವರೆಗೂ ನ್ಯಾಯದೇವತೆಯ ಕಣ್ಣಿಗೆ ಪಟ್ಟಿಯನ್ನು ಕಟ್ಟಲಾಗಿತ್ತು. ನ್ಯಾಯದೇವತೆಯ ಬಳಿಗೆ ಬಂದ ಆರೋಪಿಗಳಲ್ಲಿ ಬಡವ ಶ್ರೀಮಂತ ಎಂಬುದನ್ನು ಕಾಣಬಾರದು ಎನ್ನುವ ಅರ್ಥದಲ್ಲಿ ಇದನ್ನು ನಡೆಸಿಕೊಂಡು ಬರಲಾಗಿತ್ತು. ಇದೀಗ ಸಿಜೆಐ ಆದೇಶದಂತೆ ಕಣ್ಣಿಗೆ ಕಟ್ಟಲಾದ ಬಟ್ಟೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ತೆರೆಯಲಾಗಿದೆ.

ಈಗಾಗಲೇ ಸಿಜೆಐ ಡಿ.ವೈ.ಚಂದ್ರಚೂಡ್‌ ಅವರ ಆದೇಶದಂತೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ಹೊಸ ನ್ಯಾಯದೇವತೆಯ ಮೂರ್ತಿ ಅನಾವರಣ ಮಾಡಲಾಗಿದೆ. ಈ ನಿರ್ಧಾರವು ವಸಾಹತು ಶಾಹಿ ಪರಂಪರೆಯನ್ನು ಕಳಚಿಕೊಳ್ಳುವ ಭಾಗವಾಗಿದೆ ಎನ್ನಲಾಗಿದೆ. ಇನ್ನು ನ್ಯಾಯದೇವತೆಯ ಪ್ರತಿಮೆಯನ್ನು ಕಣ್ಣು ಪಟ್ಟಿ ಇಲ್ಲದೇ ಕಣ್ಣುಗಳನ್ನು ತೆರೆದಿರುವ ಮತ್ತು ಖಡ್ಗದ ಬದಲು ಭಾರತದ ಸಂವಿಧಾನವನ್ನು ಹಿಡಿದಿರುವ ಮೂಲಕ ದೇಶದಲ್ಲಿ ಕಾನೂನು ಕುರುಡಾಗಿಲ್ಲ ಮತ್ತು ನ್ಯಾಯದೇವತೆಯು ಶಿಕ್ಷೆಯ ಸಂಕೇತವಲ್ಲ ಎಂಬ ಸಂದೇಶವನ್ನು ಸಾರಲಾಗುತ್ತಿದೆ.

ನ್ಯಾಯದೇವತೆಯ ಇತಿಹಾಸ; ರೋಮ್​ನ ಆಗಸ್ಟಸ್ ಸಾಮ್ರಾಜ್ಯದಲ್ಲಿನ್ಯಾಯದೇವತೆಯ ಪರಿಕಲ್ಪನೆ ಮೊದಲು ಕಂಡುಬಂದಿದ್ದು, ಇದು ಮೂಲತಃ ರೋಮ್ ಸಾಮ್ರಾಜ್ಯದ ಕಲ್ಪನೆ. ನ್ಯಾಯದೇವತೆ ಎಂದರೆ ಲೇಡಿ ಆಫ್​ ಜಸ್ಟಿಸ್​. ರೋಮನ್ ಪುರಾಣಗಳಲ್ಲಿ ಬರುವ ಜಸ್ಟಿಟಿಯಾ ಎಂಬ ದೇವತೆ. ಈ ದೇವತೆ ನ್ಯಾಯಕ್ಕೆ ಅಧಿಪತಿ. 16ನೇ ಶತಮಾನದಲ್ಲಿ ಮೊದಲ ಬಾರಿ ಈ ನ್ಯಾಯದೇವತೆಯ ಕಣ್ಣಿಗೆ ಬಟ್ಟೆಯನ್ನು ಕಟ್ಟಲಾಯಿತು. ಯಾರಿಗೂ ಕೂಡ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ, ನ್ಯಾಯದೇವತೆಯೂ ಕೂಡ ಬಂದ ಆರೋಪಿಗಳಲ್ಲಿ ಬೇಧ ಭಾವ ಎಣಿಸದಿರಲಿ ಎಂಬ ಉದ್ದೇಶದಿಂದ ಈ ರೀತಿ ನಿರ್ಧಾರ ಕೈಗೊಳ್ಳಲಾಗಿತ್ತು. ಹೀಗಾಗಿ 16ನೇ ಶತಮಾನದಿಂದಲೂ ನ್ಯಾಯದೇವತೆ ಇದೇ ರೀತಿ ಕಣ್ಣಿಗೆ ಪಟ್ಟಿಕಟ್ಟಿಕೊಂಡು ಹಾಗೂ ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡ ರೂಪದಲ್ಲಿಯೇ ಇದ್ದಾಳೆ. ವಿಶ್ವದ ಅನೇಕ ರಾಷ್ಟ್ರಗಳ ಕೋರ್ಟ್​ನಲ್ಲಿ ಇದೇ ನ್ಯಾಯದೇವತೆಯನ್ನು ಕೋರ್ಟ್​ನಲ್ಲಿ ಇಡಲಾಗಿದೆ. ಮೊಟ್ಟ ಮೊದಲ ಬಾರಿ ಈ ನ್ಯಾಯದೇವತೆಯ ಎದುರು ಕೋರ್ಟ್ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಸರು ಹನ್ಸ್ ಗೈಂಗ್. 1543ರಲ್ಲಿ ಬರ್ನ್​ನಲ್ಲಿ ಈ ನ್ಯಾಯದೇವತೆಯ ಎದುರು ಮೊದಲ ವಿಚಾರಣೆ ನಡೆಸಲಾಗಿತ್ತು. ಆ ಕಾಲದಲ್ಲಿ ಬರ್ನ್, ರೋಮನ್ ಸಾಮ್ರಾಜ್ಯದ ಒಂದು ಭಾಗವಾಗಿತ್ತು ಎನ್ನಲಾಗಿದೆ. 

- Advertisement -

Latest News

error: Content is protected !!