ಸುಬ್ರಹ್ಮಣ್ಯ: ಹೋಟೆಲ್ ನಿಂದ ಲ್ಯಾಪ್ ಟಾಪ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ವಿರುದ್ಧ ಹೋಟೆಲ್ ಮ್ಯಾನೇಜರ್ ದೂರು ನೀಡಿರುವ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಕೆಲ ತಿಂಗಳ ಹಿಂದೆ ಗುಜರಾತ್ ಮೂಲದ ಅವಿನಾಶ್ ಪಾಂಡ್ ಎಂಬಾತ ಹೋಟೆಲ್ ಕೆಲಸಕ್ಕೆ ಕೆಲಸ ಮಾಡಿಕೊಂಡಿದ್ದ. ನ.7 ರಂದು ಯಾರಿಗೂ ತಿಳಿಸದೆ ಹೋಗಿದ್ದ. ಹೋಟೆಲ್ ನಲ್ಲಿದ್ದ ಲ್ಯಾಪ್ ಟ್ಯಾಪ್ ಮತ್ತು ಮೊಬೈಲ್ ಕಾಣೆಯಾಗಿದ್ದು ಅನುಮಾನಕೊಂಡು ಜೌರಮ್ ಹೋಟೆಲ್ ಮ್ಯಾನೇಜರ್ ಮಹಾವೀರ್ ಸಿಂಗ್ ಆತನಿಗೆ ಪೋನ್ ಕರೆ ಮಾಡಿ ನ.11 ಮೊಬೈಲ್ ಫೋನ್ ನನ್ನು ಕೋರಿಯರ್ ಮುಖಾಂತರ ಕಳುಹಿಸಿದ್ದು ಆದರೆ ಲ್ಯಾಪ್ ಟಾಪ್ ನ್ನು ಕಳುಹಿಸಿರುವುದಿಲ್ಲ ಆತನನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದು ಆತನು ಫೋನ್ ರಿಸೀವ್ ಮಾಡಿರುವುದಿಲ್ಲ ನಮ್ಮ ಹೋಟೇಲ್‌ನಿಂದ ನಮಗೆ ತಿಳಿಯದಂತೆ ಕಳವು ಮಾಡಿಕೊಂಡು ಹೋಗಿರುವ ಲ್ಯಾಪ್‌ಟಾಪ್ ಮೌಲ್ಯ 30,000/ ಆಗಬಹುದಾಗಿರುತ್ತದೆ.ಈ ಬಗ್ಗೆ ಹೋಟೆಲ್ ಮ್ಯಾನೆಜರ್ ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ:64/2025 ಕಲಂ:305 BNS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.


