Thursday, May 2, 2024
Homeಕೊಡಗುಕೊಡಗು ಡಿಸಿ ಕಚೇರಿ ಬಳಿ ಭೂ ಕುಸಿತದ ಭೀತಿ

ಕೊಡಗು ಡಿಸಿ ಕಚೇರಿ ಬಳಿ ಭೂ ಕುಸಿತದ ಭೀತಿ

spot_img
- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಳೆ ಜೋರಾಗಿ ಅಬ್ಬರಿಸುತ್ತಿದೆ. ಮಡಿಕೇರಿಯಲ್ಲಿರುವ ಕೊಡಗು ಡಿಸಿ ಕಚೇರಿ ಎದುರಿನ ತಡೆಗೋಡೆ ಬಳಿ ಮಣ್ಣು ಕುಸಿತವಾಗಿದೆ. ಇದರಿಂದಾಗಿ ತಡೆಗೋಡೆ ಪಕ್ಕದಲ್ಲಿರುವ ಮನೆಗೂ ಅಪಾಯ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. ಮಳೆ ನೀರು ಹರಿದು ಸಣ್ಣ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದು, ಮಳೆ ನೀರು ಹರಿಯಲು ಅಳವಡಿಸಿದ್ದ ಪೈಪ್ ಲೈನ್‌ಗೆ ಹಾನಿ ಸಂಭವಿಸಿದೆ. ಅಲ್ಲದೇ ಇದೇ ಸ್ಥಳದಲ್ಲಿ ಮತ್ತೆ ಭೂಮಿ ಕುಸಿಯುವ ಸಾಧ್ಯತೆ ಏರ್ಪಟ್ಟಿದೆ. ಮಂಗಳೂರು ರಸ್ತೆಯಲ್ಲಿರುವ ಡಿಸಿ ಕಚೇರಿ ಕೆಳಭಾಗದಲ್ಲಿ ಈಗಾಗಲೇ ಜಿಲ್ಲಾಡಳಿತ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಂಡಿದೆ.

ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಂಜು ಮುಸುಕಿದ ವಾತಾವರಣ ಉಂಟಾಗಿದ್ದು, ಮೈ ಕೊರೆಯುವ ಚಳಿಯೂ ಸ್ಥಳೀಯರನ್ನು ಕಾಡುತ್ತಿದೆ. ಗಾಳಿಬೀಡು ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು 140 ಮಿ.ಮೀ. ಮಳೆ ದಾಖಲಾಗಿದೆ. ತಲಕಾವೇರಿ ಸೇರಿದಂತೆ ಭಾಗಮಂಡಲ ಸುತ್ತಮುತ್ತಲ ಪ್ರದೇಶದಲ್ಲಿ 103.4 ಮಿ.ಮೀ. ಮಳೆ ಬಿದ್ದಿದೆ. ಹಾರಂಗಿ ಹಿನ್ನೀರು ಪ್ರದೇಶದಲ್ಲೂ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿ ಒಂದೇ ದಿನ ನಾಲ್ಕು ಅಡಿಗೂ ಹೆಚ್ಚು ನೀರು ಹರಿದು ಬಂದಿದೆ. ಕಾವೇರಿ ಸೇರಿದಂತೆ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ಮಳೆಯ ಆರ್ಭಟ ಹೀಗೆಯೇ ಮುಂದುವರಿದರೆ ಕಾವೇರಿ ಮತ್ತು ಕನ್ನಿಕೆ ನದಿಗಳು ಉಕ್ಕೇರುವ ಸಾಧ್ಯತೆ ಇದೆ. ಇದರಿಂದಾಗಿ ಭಾಗಮಂಡಲ – ನಾಪೋಕ್ಲು ಮತ್ತು ಭಾಗಮಂಡಲ-ಮಡಿಕೇರಿ ಮಧ್ಯೆ ಸಂಪರ್ಕ ಕಡಿತವಾಗುವ ಆತಂಕ ಎದುರಾಗಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ತಲುಪಿದೆ.

- Advertisement -
spot_img

Latest News

error: Content is protected !!