Wednesday, June 3, 2026
Homeಕರಾವಳಿಬಂಟ್ವಾಳ: ಮನೆ ಮೇಲೆ ಗುಡ್ಡ ಕುಸಿದು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಪ್ರಕರಣ: ರಕ್ಷಣೆ‌‌ ಮಾಡಿದ ಮತ್ತಿಬ್ಬರು...

ಬಂಟ್ವಾಳ: ಮನೆ ಮೇಲೆ ಗುಡ್ಡ ಕುಸಿದು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಪ್ರಕರಣ: ರಕ್ಷಣೆ‌‌ ಮಾಡಿದ ಮತ್ತಿಬ್ಬರು ಕಾರ್ಮಿಕರು ಚಿಕಿತ್ಸೆ ಫಲಿಸದೆ ಸಾವು

- Advertisement -
- Advertisement -

ಬಂಟ್ವಾಳ: ಭಾರೀ ಮಳೆಗೆ ಮನೆ ಮೇಲೆ ರಾತ್ರಿ ಗುಡ್ಡ ಕುಸಿದು ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಸಾವನ್ನಪ್ಪಿದ್ದಾರೆ‌.

ಕೊಟ್ಟಾಂ ನಿವಾಸಿ ಬಾಬು (46) ಮತ್ತು ಸಂತೋಷ್ ಅಲ್ಫೊನ್ಸಾ(46) ಮೃತಪಟ್ಟ ದುರ್ದೈವಿಗಳು.ನಿನ್ನೆ ರಾತ್ರಿ ರಕ್ಷಣೆ ಮಾಡಿ ಮೂವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದವರಲ್ಲಿ ಇಬ್ಬರು ಇಂದು ಸಾವನ್ನಪ್ಪಿದ್ದಾರೆ. ಕೇರಳದ ಪಾಲಕ್ಕಾಡ್ ನಿವಾಸಿ ಬಿಜು(45) ನಿನ್ನೆಯೇ ಮೃತಪಟ್ಟಿದ್ದರು.ಇನ್ನು ಗಾಯಗೊಂಡ ಇನ್ನೋರ್ವ ಕಾರ್ಮಿಕ ಜಾನಿ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಕಣ್ಣೂರಿನ ಜಾನಿ(44), ಕೊಟ್ಟಾಯಂನ ಬಾಬು(46), ಸಂತೋಷ್ ಅಲ್ಫುಝಾ (46) ಬಿಜು ಎಂಬ ಕೇರಳದ ನಾಲ್ವರು ಕಾರ್ಮಿಕರು ಹೆನ್ರಿ ಕಾರ್ಲೋ ಎಂಬವರ ಮನೆಯಲ್ಲಿ‌  ನಾಲ್ಕು ವರ್ಷಗಳಿಂದ ತೋಟದ ಕೆಲಸ ಮಾಡುತ್ತಿದ್ದರು.

ಕಾರ್ಲೋ ಅವರ ಮನೆಯ ಹತ್ತಿರದಲ್ಲಿ ಅವರಿಗೆ ಪ್ರತ್ಯೇಕ ಕೊಠಡಿ ಅವರಿಗೆ ನೀಡಲಾಗಿತ್ತು. ಈ ಕೊಠಡಿಯ ಮೇಲೆ ಗುಡ್ಡ ಕುಸಿದು ಬಿದ್ದು‌ಅನಾಹುತ ಸಂಭವಿಸಿತ್ತು.

- Advertisement -

Latest News

error: Content is protected !!