Thursday, June 4, 2026
Homeಕರಾವಳಿಉಡುಪಿಶಿರಾಡಿ ಘಾಟ್ ನಲ್ಲಿ ರಸ್ತೆ ಬಂದ್ ಆದ ಬೆನ್ನಲ್ಲೇ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭೂಕುಸಿತ :...

ಶಿರಾಡಿ ಘಾಟ್ ನಲ್ಲಿ ರಸ್ತೆ ಬಂದ್ ಆದ ಬೆನ್ನಲ್ಲೇ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭೂಕುಸಿತ : ಸ್ಥಳಕ್ಕೆ ಅಧಿಕಾರಿಗಳ ದೌಡು.

- Advertisement -
- Advertisement -

ಬೆಳ್ತಂಗಡಿ : ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ವಿಪರಿತ ಅಗಿದ್ದು ಅದರಲ್ಲಿಯೂ ಚಾರ್ಮಾಡಿ ಘಾಟ್ ಪ್ರದೇಶದ ಆರನೇ ತಿರುವಿನಲ್ಲಿ ಸಣ್ಣ ಮಟ್ಟದ ಭೂಕುಸಿತ ಉಂಟಾಗಿದೆ.


ಯಾವ ಸಂದರ್ಭದಲ್ಲಿಯೂ ಭೂಕುಸಿತ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದ್ದು ಅದಕ್ಕೆ ಬೆಳ್ತಂಗಡಿ ಅರಣ್ಯ ಇಲಾಖೆಯ ಸಿಬ್ಬಂದಿ ಎಲ್ಲಾ ಪರಿಕರಗಳನ್ನು ಹಿಡಿದು ಚಾರ್ಮಾಡಿ ಘಾಟಿಯಲ್ಲಿ ಯಾವುದೇ ತೊಂದರೆಯಾದರೂ ಬಗೆಹರಿಸಲು ರೆಡಿಯಾಗಿದೆ ಎಂದು ಚಾರ್ಮಾಡಿ ಫಾರೆಸ್ಟರ್ ರವೀಂದ್ರ ಅಂಕಲಗಿ ತಿಳಿಸಿದ್ದಾರೆ. ಇನ್ನೂ 6ನೇ ತಿರುವಿನಲ್ಲಿ ಸಣ್ಣ ಮಟ್ಟದ ಭೂಕುಸಿತ ಉಂಟಾದ ಪ್ರದೇಶಕ್ಕೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಬೆಳ್ತಂಗಡಿ ತಹಶಿಲ್ದಾರ್ ಮಹೇಶ್.ಜೆ ಹಾಗೂ ಸಿಬ್ಬಂದಿಗಳು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!