Thursday, June 4, 2026
Homeಕರಾವಳಿಉಡುಪಿಕಾರ್ಕಳ; ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

ಕಾರ್ಕಳ; ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

- Advertisement -
- Advertisement -

ಕಾರ್ಕಳ : ಆಕಸ್ಮಿಕವಾಗಿ ತ ಬಾವಿಗೆ ಬಿದ್ದಿದ್ದ ಮಹಿಳೆಯೊಬ್ಬರನ್ನ ರಕ್ಷಿಸಿರುವ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಕೆದಿಂಜೆ ಕುಂಟಲ ಗುಂಡಿ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.

ಹರಿಣಾಕ್ಷಿ(31) ಬಾವಿಗೆ ಬಿದ್ದ ಮಹಿಳೆ. ಅವರು ಸುಮಾರು 35 ಅಡಿ ಆಳದ ಬಾವಿಗೆ ಮಹಿಳೆ ಕಾಲುಜಾರಿ ಆಕಸ್ಮಿಕವಾಗಿ ಬಿದ್ದಿದ್ದು ಕಾರ್ಕಳ ಅಗ್ನಿಶಾಮಕ ದಳದವರು ಹಾಗೂ ಕಾರ್ಕಳ ಆರಕ್ಷಕ ಠಾಣೆಯವರು ಬಾವಿಗಿಳಿದು  ರಕ್ಷಿಸಿದ್ದಾರೆ.

ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೊನಿಸ್, ಅಗ್ನಿಶಾಮಕ ಸಿಬ್ಬಂದಿಗಳಾದ ಹರಿಪ್ರಸಾದ್ ಶೆಟ್ಟಿಗಾರ್, ಜಯ ಮೂಲ್ಯ ,ಮನೋಹರ್ ಪ್ರಸಾದ್, ಹಸನ್ ಸಾಬ್ ಮುಲ್ತಾನಿ, ಸದಾನಂದ ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!