Thursday, June 4, 2026
Homeಇತರಗಂಡನನ್ನು ಬಿಟ್ಟು ಸಂಗಾತಿ ಜೊತೆ ಲಿವ್ ಇನ್ ರಿಲೇಶನ್ ಶಿಪ್, ಮತ್ತೊಬ್ಬನೊಂದಿಗೆ ಸಲಿಗೆ, ಮೊಬೈಲ್ ಪಾಸ್...

ಗಂಡನನ್ನು ಬಿಟ್ಟು ಸಂಗಾತಿ ಜೊತೆ ಲಿವ್ ಇನ್ ರಿಲೇಶನ್ ಶಿಪ್, ಮತ್ತೊಬ್ಬನೊಂದಿಗೆ ಸಲಿಗೆ, ಮೊಬೈಲ್ ಪಾಸ್ ವರ್ಡ್ ನೀಡದಕ್ಕೆ ಪ್ರಿಯಕರನಿಂದನೇ ಕೊಲೆ

- Advertisement -
- Advertisement -

ನವದೆಹಲಿ:  ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದ ಸಂಗಾತಿ ಪಾಸ್ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ್ದರಿಂದ ಆಕೆಯನ್ನು  ಆಕೆಯ ಸಂಗಾತಿಯೇ ಕೊಲೆ ಮಾಡಿದ ಘಟನೆ ದೆಹಲಿಯ ವಿನೋದ್ ನಗರದಲ್ಲಿ ನಡೆದಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

 ಕೊಲೆಯಾದ ಮಹಿಳೆಯನ್ನು ಮಮತಾ ಶರ್ಮಾ (35) ಎಂದು ಗುರುತಿಸಲಾಗಿದೆ. ಖಾಸಗಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಮತಾ ಶರ್ಮಾ ಅವರನ್ನು ಲಿವಿ ಇನ್ ಸಂಗಾತಿ ಬ್ರಹ್ಮಪಾಲ್ ಸಿಂಗ್ (39) ಕೊಲೆ ಮಾಡಿದ್ದಾನೆ.

ಮೂರು ವರ್ಷದ ಹಿಂದೆ ಗಂಡನನ್ನು ತೊರೆದಿರುವ ಮಮತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಎರಡು ವರ್ಷಗಳ ಹಿಂದೆ ಮೂರು ಮಕ್ಕಳೊಂದಿಗೆ ವಿವಾಹಿತ ಬ್ರಹ್ಮಪಾಲ್ ಜೊತೆಗೆ ಸೇರಿ ಜೀವನ ನಡೆಸುತ್ತಿದ್ದರು. ಸಿಂಗ್ ಕುಟುಂಬದವರು ಜಗಳ ಮಾಡುತ್ತಿದ್ದ ಕಾರಣ ಆತನೊಂದಿಗೆ ಸಂಬಂಧ ಕಡಿದುಕೊಳ್ಳಲು ಮಮತಾ ಶರ್ಮಾ ಮುಂದಾಗಿದ್ದಳು.

ಈ ನಡುವೆ ಬ್ರಹ್ಮಪಾಲ್ ಗೆ ಮಮತಾ ನಡೆ ಮೇಲೆ ಅನುಮಾನ ಉಂಟಾಗಿದೆ. ಯಾರೊಂದಿಗೋ ಫೋನ್ ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ್ದಾನೆ. ಹೀಗಾಗಿ, ಮೊಬೈಲ್ ಪಾಸ್ವರ್ಡ್ ಕೊಡುವಂತೆ ಕೇಳಿದ್ದಾನೆ. ಆಕೆ ಪಾಸ್ವರ್ಡ್ ನೀಡಲು ನಿರಾಕರಿಸಿದಾಗ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಉಪಪೊಲೀಸ್ ಆಯುಕ್ತ ರಾಕೇಶ್ ಪವೇರಿಯಾ ತಿಳಿಸಿದ್ದಾರೆ.

- Advertisement -

Latest News

error: Content is protected !!