Sunday, June 7, 2026
Homeಕರಾವಳಿಉಡುಪಿಕುಂದಾಪುರ; ಪುತ್ರನೊಂದಿಗೆ ಮಹಿಳೆ ನಾಪತ್ತೆ

ಕುಂದಾಪುರ; ಪುತ್ರನೊಂದಿಗೆ ಮಹಿಳೆ ನಾಪತ್ತೆ

- Advertisement -
- Advertisement -

ಕುಂದಾಪುರ; ಪುತ್ರನೊಂದಿಗೆ ಮಹಿಳೆ ನಾಪತ್ತೆಯಾಗಿರುವ ಘಟನೆ ಕುಂದಾಪುರ ಕೋಣಿ ಗ್ರಾಮದ ಕೇಳಕೇರಿ ಎಂಬಲ್ಲಿ ನಡೆದಿದೆ. ರೋಸ್ ಮೇರಿ ಕೋತಾ (39) ನಾಪತ್ತೆಯಾದ ಮಹಿಳೆ.  ರೋಸ್ ಮೇರಿ ತನ್ನ 11 ವರ್ಷದ ಮಗನಾದ ರಿಶೋನ ಕೋತಾ ಅವರೊಂದಿಗೆ ಜನವರಿ 18 ರಿಂದ ನಾಪತ್ತೆಯಾಗಿದ್ದಾರೆ. ರೋಸ್ ಮೇರಿ ಕೋತಾ 5 ಅಡಿ 6 ಇಂಚು ಎತ್ತರ ಎಣ್ಣೆಕಪ್ಪು ಮೈಬಣ್ಣ, ಸಾಧರಾಣ ಶರೀರ ಹೊಂದಿದ್ದು, ಕನ್ನಡ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ. ರಿಶೋನ ಕೋತಾ 4 ಅಡಿ ಎತ್ತರ, ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂ.ಸಂಖ್ಯೆ: 08254-230338, ಪಿ.ಐ ಕುಂದಾಪುರ ಠಾಣೆ ಮೊ.ಸಂ: 9480805455 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -

Latest News

error: Content is protected !!