Wednesday, June 3, 2026
Homeಕರಾವಳಿಪುತ್ತೂರು: ತಾಯಿ ಮನೆಗೆ ಎಂದು ಮಗುವಿನೊಂದಿಗೆ ಹೋದ ಮಹಿಳೆ ನಾಪತ್ತೆ

ಪುತ್ತೂರು: ತಾಯಿ ಮನೆಗೆ ಎಂದು ಮಗುವಿನೊಂದಿಗೆ ಹೋದ ಮಹಿಳೆ ನಾಪತ್ತೆ

- Advertisement -
- Advertisement -

ಪುತ್ತೂರು: ತಾಯಿ ಮನೆಗೆಂದು ಮಗುವಿನೊಂದಿಗೆ ತೆರಳಿದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪುಳಿತ್ತಡಿ ನಿವಾಸಿ ನೆಲ್ಯಾಡಿ ಅಲ್ತಾ ಎಂಬವರ ಪತ್ನಿ ಇರ್ಶಾನಾ (25) ಹಾಗೂ ಅವರ ಒಂದೂವರೆ ವರ್ಷದ ಮಗ ಮೊಹಮ್ಮದ್ ಆದಿಲ್ ನಾಪತ್ತೆಯಾಗಿರುವ ಬಗ್ಗೆ ಸಂಪ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

ವಾರದ ಹಿಂದೆ ಇರ್ಶಾನಾ ಪುಳಿತ್ತಡಿಯಲ್ಲಿರುವ ತನ್ನ ತವರು ಮನೆಗೆ ಹೋಗಿದ್ದು, ಮದುವೆಗೆಂದು ಕೇರಳಕ್ಕೆ ತೆರಳಿದ್ದ ಆಕೆಯ ಪೋಷಕರು ಮೇ 20 ರಂದು ಮನೆಗೆ ಹಿಂದಿರುಗಿದಾಗ ಆಕೆ ತನ್ನ ಮಗನೊಂದಿಗೆ ನಾಪತ್ತೆಯಾಗಿದ್ದಳು. ಈ ಸಂಬಂಧ ಇರ್ಷಾನ ತಂದೆ ಅಬ್ದುಲ್ ಲತೀಫ್ ನೀಡಿದ ದೂರಿನ ಮೇರೆಗೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!