Wednesday, June 24, 2026
Homeಕರಾವಳಿಉಡುಪಿಹಲಸಿನ ಮರದಿಂದ ಬಿದ್ದು ವ್ಯಕ್ತಿ ಸಾವು

ಹಲಸಿನ ಮರದಿಂದ ಬಿದ್ದು ವ್ಯಕ್ತಿ ಸಾವು

- Advertisement -
- Advertisement -


ಉಡುಪಿ: ಹಲಸಿನ ಹಣ್ಣು ಕೊಯ್ಯಲು ಮರ ಹತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಕೋಟದಲ್ಲಿ ನಡೆದಿದೆ.

ನಂಚಾರು ಗ್ರಾಮದ ಅಂಡಾರುಕಟ್ಟೆ ನಿವಾಸಿ ಮಂಜುನಾಥ ಶೆಟ್ಟಿ 50) ಮೃತ ದುರ್ದೈವಿ. ಮನೆಯ ಎದುರು ಇರುವ ಮರಕ್ಕೆ ಹಲಸಿನ ಹಣ್ಣು ಕೊಯ್ಯಲು ಹತ್ತಿದ್ದ ವೇಳೆ ಅವರು ಆಕಸ್ಮಿಕವಾಗಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!